ಬಂಟ್ವಾಳ : 2017-18ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ರೋ.1ಕೋಟಿ ವೆಚ್ಚದಲ್ಲಿ ಕಳ್ಳಿಗೆ ಗ್ರಾಮದ ದರಿಬಾಗಿಲು-ನೆತ್ತರೆಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆಯನ್ನು ಅರಣ್ಯ ಪರಿಸರ ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ರತ್ನಾ, ತಾ.ಪಂ.ಸದಸ್ಯ ಶಿವಪ್ರಸಾದ್ ಕನಪಾಡಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಕಳ್ಳಿಗೆ ಗ್ರಾ.ಪಂ.ಸದಸ್ಯ ಮಧುಸೂದನ್ ಶೆಣೈ, ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ಎ.ಪಿ.ಎಂ.ಸಿ ಸದಸ್ಯ ದಿವಾಕರ ಪಂಬದಬೆಟ್ಟು, ಮಾಜಿ ಸ್ಥಾಯಿ ಸಮಿತಿ ಸದಸ್ಯ ಮಾಧವ ಮಾವೆ, ಜಿ.ಪಂ.ಇಂಜಿನಿಯರ್ ಕೃಷ್ಣ, ಗುತ್ತಿಗೆದಾರ ಸುಧಾಕರ ಶೆಟ್ಟಿ, ದಾಮೋದರ್,ತುಂಬೆ ವಲಯಾಧ್ಯಕ್ಷ ಮೋನಪ್ಪ ಮಜಿ, ನ್ಯಾಯವಾದಿ ರಮೇಶ್ ಉಪಾಧ್ಯಾಯ, ಪ್ರಮುಖರಾದ ರಾಘವ ಕಾರಂತ, ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ನವೀನ್ ಚಂದ್ರ ಶೆಟ್ಟಿ, ಕುಂಞ ಮೋನು, ಅರ್ಬಿ ಸುರೇಶ್, ಹೇಮಲತಾ, ಜನಾರ್ಧನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

