ಕೈಕಂಬ:ರಾಷ್ಟ್ರೀಯ ಹೆದ್ದಾರಿ (169) ಹೋರಾಟ ಸಮಿತಿ ಮತ್ತು ಸಮಸ್ತ ರಾಷ್ಟ್ರೀಯ ಹೆದ್ದಾರಿ ಬಳಕೆದಾರ ನಾಗರಿಕರು, ಮಂಗಳೂರು, ಮೂಡಬಿದ್ರಿ, ಕಾರ್ಕಳ ಇದರ ನೇತ್ರತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 169 ನ್ನು ಚುತುಷ್ಪಧ ಗೂಳಿಸುವಂತೆ ಮತ್ತು ಹದಗೆಟ್ಟ ರಸ್ತೆಗೆ ಡಾಮರೀಕರಣ ಗೂಳಿಸುವಂತೆ ಅಗ್ರಹಿಸಿ ಗುರುಪುರ ಕೈಕಂಬದಲ್ಲಿ ಪ್ರತಿಭಟನಾ ಸಭೆ ಮತ್ತು ಸಾಂಕೇತಿಕ ಹೆದ್ದಾರಿ ತಡೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅದ್ಯಕ್ಷ ಸುಧಾಕರ ಪೂಂಜಾರವರು ಹೆದ್ದಾರಿಯನ್ನು ಚತುಷ್ಪಧಗೊಳಿಸುವಂತೆ 5 ವರ್ಷಗಳ ಹಿಂದೆಯೇ ಮನವಿ ನೀಡಿ ಒತ್ತಾಯಿಸಲಾಗಿದೆ.
ಒಂದು ವರ್ಷದ ಹಿಂದೆ ಹೆದ್ದಾರಿಯಲ್ಲಿ 21,000 ಯೂನಿಟ್ ವಾಹನಗಳ ಸಂಚಾರವನ್ನು ಗಣತಿ ಮಾಡಲಾಗಿತ್ತು. ಈಗ ವಾಹನಗಳು ಅದಕ್ಕಿಂತ ಹೆಚ್ಚಾಗಿವೆ 169 ನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾತ್ರ ಅಗಿದೆ. ಅಭಿವೃದ್ದಿ ಅಗಿಲ್ಲ ಈ ಭಾಗದ ಶಾಸಕರಿಂದ ಹಿಡಿದು ಕೇಂದ್ರ ಹೆದ್ದಾರಿ ಸಚಿವರವರೆಗೂ ಮನವಿ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ ಅಗೊಮ್ಮೆ ಈಗೊಮ್ಮೆ ಹೆದ್ದಾರಿ ಚತುಷ್ಪಧ ಬಗ್ಗೆ ಹೇಳಿಕೆಗಳನ್ನು ನೀಡಿ ಸುಳ್ಳು ಹೇಳುತ್ತಿರುವ ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳು ಕೂಡಾ ಸುಳ್ಳು ಹೇಳುತ್ತಿದ್ದಾರೆ, ಪ್ರಧಾನ ಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದು ಈ ಬಗ್ಗೆ ಕ್ರಮ ಕೈಗೂಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಅದೇಶಿಸಿದ ಬಗ್ಗೆ ಪತ್ರ ಬಂದಿದೆ ಅದರೆ ಹೆದ್ದಾರಿ ಪ್ರಾಧಿಕಾರ ಮಾತ್ರ ಎಚ್ಚೆತ್ತಿಲ್ಲ.
ಸರ್ವೆ ಭೂಸ್ವಾದೀನ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರೆ ಯಾವುದೇ ಕೆಲಸ ಆಗಿಲ್ಲ ಇದಕ್ಕೆ ಸಂಬಂದ ಪಟ್ಟ ಕಡತ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ದೂಳು ತಿನ್ನುತ್ತಿದೆ ಕಡತ ಯಾಕೆ ಮುಂದೆ ಹೋಗುತ್ತಿಲ್ಲ ಎಂಬುದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕು. ಗುರುಪುರ ಸೇತುವೆ ಶಿಥಿಲವಾಗಿದೆ. ಇದು 95 ವರ್ಷ ಹಳೆಯ ಸೇತುವೆ. ಇದರ ಥಾರಕ್ ಸಾಮಥ್ರ್ಯವನ್ನು ಇದುವರೆಗೂ ಅದ್ಯಯನ ಮಾಡಿಲ್ಲ ಸೇತುವೆಯ ಸಾಮಥ್ರ್ಯದ ದುಪ್ಪಟ್ಟ ಭಾರದ ವಾಹನಗಳು ಸಂಚರಿಸುವುದರಿಂದ ಸೇತುವೆ ಕುಸಿಯುವ ಭೀತಿ ಇದೆ. ಜನ ಪ್ರತಿನಿಧಿಗಳು ನಿಷ್ಟ್ರೀಯರಾಗಿದ್ದಾರೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಮಾಮೂಲಿಯಾಗಿದೆ. ಹೆದ್ದಾರಿಯಲ್ಲಿ ನಡೆದ ಅಪಘಾತಗಳಲ್ಲಿ ಹಲವಾರು ಅಮಾಯಕರು ಪ್ರಾಣತೆತ್ತಿದ್ದಾರೆ ಇನ್ನೆಷ್ಷು ಪ್ರಾಣಗಳ ಬಲಿಗಾಗಿ ಇವರು ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ಚತುಷ್ಪಥಕ್ಕಾಗಿ ಮುಂದೆ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಿತಿಯ ಉಪಾಧ್ಯಕ್ಷ ದಿವಾಕರ ಶೆಟ್ಟಿ ತೋಡಾರು ಮಾತನಾಡಿ ಗ್ರಾಮಾಂತರ ರಸ್ತೆಗಿಂತ ಹೆದ್ದಾರಿಯ ಸ್ಥಿತಿ ಶೋಚನೀಯವಾಗಿದೆ. ನಮ್ಮ ಹೋರಾಟ ಪಕ್ಷಾತೀತವಾದುದು. ಹೆದ್ದಾರಿ ಚುತುಷ್ಪದವೇ ಹೋರಾಟದ ಉದ್ದೇಶ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಹೆದ್ದಾರಿ ತಡೆ ಜಿಲ್ಲಾ ಬಂದ್ ಮಾಡುವ ಮೂಲಕ ಹೋರಾಟವನ್ನು ತಿವ್ರಗೊಳಿಸುವುದಾಗಿ ಹೇಳಿದರು. ಡಿ.ವೈ.ಎಫ್.ಐ ಮುಖಂಡ ಯಾದವ ಶೆಟ್ಟಿ ಮೂಡಬಿದ್ರಿ, ನಿಶ್ಮಿತಾ ಮೊಟಾರ್ಸೆನ ನಾರಾಯಣ ಪಿ.ಎಂ. ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 169 ರಾಷ್ಟ್ರೀಯ ಹೆದ್ದಾರಿಯಲ್ಲಿ ಇದುವರೆಗೆ ಅಪಘಾತದಲ್ಲಿ ಮೃತ ಪಟ್ಟವರಿಗೆ ಶೃದ್ದಾಂಜಲಿ ಅರ್ಪಿಸಲಾಯ್ತು. ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ, ಜಿಲ್ಲಾ ಪಂಚಾಯತ್‍ನ ಮಾಜಿ ಸದಸ್ಯ ವಿನೋದ್ ಮಾಡ, ಅಬ್ದುಲ್ ಹಮೀದ್, ತಾಲೂಕು ಪಂಚಾಯತ್‍ನ ಮಾಜಿ ಸದಸ್ಯ ಯಶವಂತ ಆಳ್ವ, ಸುಧಾಕರ ಅಮೀನ್ ಸೇರಿದಂತೆ ಹಲವಾರು ಬಸ್ಸು ಮಾಲಿಕರು ಸಾರ್ವಜನಿಕರು ಪ್ರತಿಭಟಾನ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಸಾಂಕೇತಿಕವಾಗಿ ಹೆದ್ದಾರಿ ತಡೆ ನಡೆಸಲಾಯಿತು.
