ಮಂಗಳೂರು: ದ.ಕ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಲಿಒಂದಾದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕಲಶದ ಸೇವಾ ರಶೀದಿ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭವು ಶ್ರೀಕ್ಷೇತ್ರದಲ್ಲಿ ನಡೆಯಿತು.
ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಕೆ. ಚಿತ್ತರಂಜನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಬ್ರಹ್ಮಶ್ರೀ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಕೆ.ಟಿ. ಸುವರ್ಣ ಅವರು ಕಳಸದ ಸೇವಾ ರಶೀದಿಯನ್ನು ಬಿಡುಗಡೆಗೊಳಿಸಿದರು ಹಾಗೂ ಶಬರಿ ಟ್ರಾವೆಲ್ಸ್ನ ಮಾಲಕರಾದ ಉದ್ಯಮಿ ಶ್ರೀಯುತ ಸದಾನಂದ ಪೂಜಾರಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು .
ಡಿಸೆಂಬರ್ ತಿಂಗಳ ತಾ. 25 ರಿಂದ ತಾ.28 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಯು ಈಗಾಗಲೇ ನಡೆದಿದ್ದು ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ ಭಕ್ತಾಭಿಮಾನಿಗಳ ಎಲ್ಲರ ಸಂಪೂರ್ಣ ಸಹಕಾರದಿಂದ ಈಗಾಗಲೇ ಹೆಚ್ಚಿನ ಕೆಲಸ ಕಾರ್ಯವೂ ಮುಗಿದಿದ್ದು ಕೊನೆಯ ಹಂತದ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಿ ಚಿತ್ತರಂಜನ್ ಅವರು ಹೇಳಿದರು ಸಮಾರಂಭದಲ್ಲಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಕೆ. ಧರ್ಮಪಾಲ. ಗರಡಿ ಕ್ಷೇತ್ರದ ಮುಕ್ತೇಸರ ರಾದ ಶ್ರೀ ಬಿ ದಾಮೋದರ ನಿಸರ್ಗ . ದಿವರಾಜ್ ಕ್ಷೇತ್ರದ ಮೆನೇಜರ್ ಶ್ರೀಯುತ ಕಿಶೋರ್ ಮಜಿಲ. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರು ಮೊಕ್ತೇಸರರು ಆದ ಶ್ರೀಯುತ ಕೇಶವ ಅಂಗಡಿ ಮಾರ್ ಪ್ರಚಾರ ಸಮಿತಿಯ ಸಂಚಾಲಕರಾದ ಶ್ರೀಯುತ ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು .ಗರೋಡಿ ಬಿಲ್ಲವ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀಯುತ ದಿನೇಶ್ ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂದೀಪ್ ಸಾಲ್ಯಾನ್ ವಂದಿಸಿದರು
