ಬಂಟ್ವಾಳ: ಪರವಾನಿಗೆ ಇಲ್ಲದೆ ದನ ಸಾಗಾಟ ಮಾಡುವ ವೇಳೆ ಇಬ್ಬರು ಆರೋಪಗಳನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ದ ಘಟನೆ ಮಧ್ಯಾಹ್ನ ಮೊಗರ್ನಾಡು ಎಂಬಲ್ಲಿ ನಡೆದಿದೆ. ಶಂಭೂರು ನಿವಾಸಿಗಳಾದ ಪಿಕಪ್ ಚಾಲಕ ಪೆಲಿಕ್ಸ್ ಡಿ.ಸೋಜ ಮತ್ತು ಯತೀಶ್ ಬಂಧಿತ ಆರೋಪಿಗಳು.
ಶಂಭೂರು ವ್ಯಕ್ತಿಯೋರ್ವರಿಂದ ದನಗಳನ್ನು ಪಡೆದು ಬೊಳ್ಳಾಯಿಗೆ ಕೊಂಡು ಹೋಗುತ್ತಿದ್ದ ವೇಳೆ ಮೊಗರ್ನಾಡು ದೇವಸ್ಥಾನ ದ ಬಳಿ ನಗರ ಪೋಲಿಸರು ಬಂಧಿಸಿ ಒಂದು ದನ ಮತ್ತು ಒಂದು ಕರು ಹಾಗೂ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಸ್ಥಳೀಯ ಗ್ರಾ.ಪಂ.ನಿಂದ ಯಾವುದೇ ಪರವಾನಿಗೆಯನ್ನು ಪಡೆಯದೆ ದನ ಸಾಗಾಟ ಮಾಡಿದ ವೇಳೆ ಖಚಿತ ಮಾಹಿತಿ ಯ ಮೇರೆಗೆ ದಾಳಿ ಮಾಡಿದ್ದರು. ನಗರ ಪೋಲಿಸ್ ಉಪನಿರೀಕ್ಷಕ ಚಂದ್ರಶೇಖರ್ ಮತ್ತು ಸಿಬ್ಬಂದಿ ಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

