ಗುರುಪುರ ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’ ಮತ್ತು ಶ್ರೀ ವಜ್ರದೇಹಿ ಬಳಗದ ಷಷ್ಠಮ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನ. 20ರಂದು ಮಠದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಡೆಯಿತು. ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಬಜರಂಗ ದಳ ಶ್ರೀ ವಜ್ರದೇಹಿ ಶಾಖೆ ಗುರುಪುರದ ಸಂಚಾಲಕ ಪ್ರೇಮ್ ಗುರುಪುರ ಮತ್ತು ಹಿಂದೂ ಜಾಗರಣ ಸಮತಿಯ ಅಧ್ಯಕ್ಷ ಕೆ ಆರ್ ಶೆಟ್ಟಿ ಉಪಸ್ಥಿತರಿದ್ದರು.
ಜೊತೆಗೆ ಪ್ರಶಾಂತ್ ಗುರುಪುರ ರಚಿಸಿದ, ಜಗದೀಶ್ ಪುತ್ತೂರು ಮತ್ತು ಪ್ರಶಾಂತ್ ಸಕಲೇಶಪುರ ಹಾಡಿರುವ ಮಠದ ಸ್ವಾಮಿ ಅಭಯ ನರಸಿಂಹ ದೇವರ ಭಕ್ತಿಗೀತೆ ಹಾಗೂ ವಜ್ರದೇಹಿ ಜಾತ್ರೆಯ ಶೀರ್ಷಿಕೆ ಗೀತೆ ಬಿಡುಗಡೆಗೊಳಿಸಲಾಯಿತು. ಮಠ ಹಾಗೂ ಬಳಗದ ಮೂರು ದಿನಗಳ ಕಾರ್ಯಕ್ರಮವು ಜನವರಿ 3ರಿಂದ 5ರವರೆಗೆ ಜರುಗಲಿದೆ.


