ಕುಪ್ಪೆಪದವು :ಪುರಾಣ ಪ್ರಸಿದ್ದ ಕುಪ್ಪೆಪದವು ಬಾರ್ದಿಲ ಶ್ರೀಸಾಂಬಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಸುತ್ತು ಪೌಳಿ ನಿರ್ಮಾಣದ ಪಾದುಕಾನ್ಯಾಸ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪಾದುಕನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು ದೇರೆಬೈಲು ಶಿವಪ್ರಸಾದ್ ತಂತ್ರಿಗಳು ನಡೆಸಿಕೊಟ್ಟರು. ಸುಮಾರು 98 ಲಕ್ಷ ರೂಪಯಿ ವೆಚ್ಚದಲ್ಲಿ ಸುತ್ತು ಪೌಳಿಯ ನಿರ್ಮಾಣವಾಗಲಿದೆ.
ಆಡಳಿತ ಮೊಕ್ತೇಸರ ಸೋಮಶೇಖರ ಶೆಟ್ಟಿ ಉಳಿಪಾಡಿಗುತ್ತು, ಸಮಿತಿಯ ಸದಸ್ಯರು, ಆರ್ಚಕ ರಾಘವೇಂದ್ರ ಕಾರಂತ, ಗುತ್ತಿಗೆದಾರ ಜಗದೀಶ್ ಕುಳಾಲ್ ಪಾಕಜೆ, ರಾಜೇಶ್ ಶೆಟ್ಟಿ ಉಳಿಪಾಡಿಗುತ್ತು, ಜಗನಾಥ ಶೆಟ್ಟಿ, ಸುನೀಲ್ ಬಾರ್ದಿಲ, ಶಿವರಾಮ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಭಾಸ್ಕರ ಶೆಟ್ಟಿ ಬಾರ್ದಿಲ ಮತ್ತು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
