ವಿಟ್ಲ : ಪೆರಾಜೆ ಗ್ರಾಮದ ಬುಡೋಳಿ ಪೇಟೆ ಶೇರಾ ಶಾಲೆ-ಬನಾರಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರೂ.90ಲಕ್ಷ ವೆಚ್ಚದ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.

ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮ ದ ಅಧ್ಯಕ್ಷ ಬಿ.ಎಚ್.ಖಾದರ್, ಜಿ.ಪಂ.ಸದಸ್ಯರಾದ ಮಂಜುಳಾ ಮಾಧವ ಮಾವೆ , ಎಂ.ಎಸ್.ಮಹಮ್ಮದ್, ತಾ.ಪಂ.ಸದಸ್ಯೆ ಮಂಜುಳಾ ಕುಶಲ ಎಂ.ಪೆರಾಜೆ, ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ಮಾಜಿ ತಾ.ಪಂ.ಸದಸ್ಯ ಕುಶಲ ಎಂ.ಪೆರಾಜೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಗುತ್ತಿಗೆದಾರ ಉಮರ್ ಫಾರುಕ್, ಪಂ.ಸದಸ್ಯರಾದ ನೀಲಯ ಪೂಜಾರಿ, ತಿಮ್ಮಪ್ಪ, ಇಂದಿರಾ, ಉಮ್ಮರ್ ಬಿ., ಪ್ರಮುಖರಾದ ಚೆನ್ನಪ್ಪ ಅಂಚನ್, ಅಪ್ರಾಯ ಪೈ, ಈಶ್ವರ ಪೂಜಾರಿ , ಪುರುಷೋತ್ತಮ ಶೆಟ್ಟಿ ಕಲ್ಲಾಡಿ, ಶಾಂತಪ್ಪ ಬಂಗೇರಾ, ಉಮರ್ ಎಸ್, ಗಂಗಾಧರ ಶೇರಾ, ಲಿಂಗಪ್ಪ , ನಾರಾಯಣ ಸಾಲ್ಯಾನ್ ಉಪಸ್ಥಿತರಿದ್ದರು.
