ವಿಟ್ಲ :  : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಂಡಿತ್ ಜವಾಹರ್‍ಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಗೌರವ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ, ಯುವ ವಿಜ್ಞಾನಿಯಾದ ಶ್ರೀಲಕ್ಷ್ಮೀ.ಪೈ.ಎನ್ ಮಾತನಾಡುತ್ತಾ “ ನಾವೆಲ್ಲರೂ ಭಾರತದ ಮಕ್ಕಳು. ಭಾರತದ ಪ್ರಗತಿಗಾಗಿ ಶ್ರಮಿಸಿ, ಭಾರತದ ಭವಿಷ್ಯವನ್ನು ಉಜ್ವಲವಾಗಿಸೋಣ ಎನ್ನುತ್ತಾ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ “ ದೇಶಕ್ಕೆ ಒಳಿತನ್ನು ಮಾಡಿ” ಎಂಬ ನುಡಿಯನ್ನು ನೆನಪಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಪ್ರಹ್ಲಾದ್ ಜೆ ಶೆಟ್ಟಿಯವರು ಮಾತನಾಡಿ “ ಮಕ್ಕಳು ಉತ್ತಮವಾದ ಶ್ರೇಷ್ಠ ವಿಚಾರಗಳಲ್ಲಿ ತೊಡಗಿ ಈ ದಿನದ ಪವಿತ್ರತೆಯನ್ನು ಉಳಿಸಿಕೊಳ್ಳಬೇಕು” ಎಂದರು.

???????????????????????????????

???????????????????????????????

???????????????????????????????

???????????????????????????????
ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ , ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ ಶೆಟ್ಟಿ , ಗ್ರೇಸ್ ಪಿ ಸಲ್ಡಾನ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ಅಟ್ಟಾ ಮುಟ್ಟಾ’ ಮಕ್ಕಳ ನಾಟಕೋತ್ಸವದಲ್ಲಿ ಪಾಲ್ಗೊಂಡ ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಹಾಗೂ ವಿವೇಕಾನಂದ ಪ.ಪೂರ್ವ ಕಾಲೇಜಿನಲ್ಲಿ ಕನಸುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಧನ್ಯಶ್ರೀ ಸ್ವಾಗತಿಸಿ. ಸುರಕ್ಷಾ ವಂದಿಸಿದರು. ಫಾತಿಮತ್ ಅಫ್ರಾ , ಆಶಿಷಾ , ಮುನಿಝ , ಪ್ರೀತಿ ಮತ್ತು ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *