ಬಂಟ್ವಾಳ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ಶನಿವಾರ ಭೇಟಿ ನೀಡಿ ಆರೋಗ್ಯ ವಿಮೆ ಸಹಿತ ವಿವಿಧ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷೆ ಉಮಾವತಿ, ಗೌರವಾಧ್ಯಕ್ಷೆ ರೇಣುಕಾ ಪೊಳಲಿ, ಕಾರ್ಯದರ್ಶಿ ರೇಖಾ ಇರಾ, ಕಾರ್ಯಧ್ಯಕ್ಷೆ ಭಾರತಿ ಕೊಳ್ನಾಡು, ಉಪಾಧ್ಯಕ್ಷೆ ಜಯಶ್ರೀ ವಿಟ್ಲ, ಮಾಜಿ ಅಧ್ಯಕ್ಷೆ ವಸಂತಿ, ಸಂಘಟನಾ ಕಾರ್ಯದರ್ಶಿ ವಿಜಯವಾಣಿ ಶೆಟ್ಟಿ, ಸುಜಾತ ಬಾರಿಂಜ, ಪ್ಲಾಸಿಡ್ ಡಿಸೋಜಾ, ಶ್ರೀವಾಣಿ ಬಿ.ಸಿ.ರೋಡು, ಯಶೋಧ ಬಡಕಬೈಲ್, ಸುರೇಖಾ ಕುದ್ರೆಬೆಟ್ಟು ಮತ್ತಿತರರು ಇದ್ದರು.
