ಬಂಟ್ವಾಳ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದೂಗಳ ಹತ್ಯೆ ಮತ್ತು ಭ್ರಷ್ಟ ರಾಜಕಾರಣದಿಂದ ಜನತೆ ರೋಸಿ ಹೋಗಿದ್ದಾರೆ. ಇದರಿಂದಾಗಿ ಕಂಗೆಟ್ಟಿರುವ ನಾಡಿನ ಮಹಿಳೆಯರು ಸಹಿತ ಸಮಸ್ತ ಜನರ ಸಂಕಷ್ಟ ತಿಳಿಕೊಂಡು ಕಾಂಗ್ರೆಸ್ ಮುಕ್ತ ರಾಜ್ಯ ನಿರ್ಮಾಣಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 
ಈ ಯಾತ್ರೆ ಕೇವಲ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಮಾತ್ರ ಅಲ್ಲ ಎಂದು ಸ್ಪಷ್ಟಪಡಿಸ ಅವರು, ರಾಜ್ಯದಲ್ಲಿ ಆಡಳಿತ ನಡೆಸಲು ಪ್ರಾಮಾಣಿಕ ಕೈಗಳ ಕೊರತೆ ಇದೆ. ದೇಶದ ಗಡಿ ಕಾಯುವ ಸೈನಿಕನಂತೆ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ದೇಶ ಮತ್ತು ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್ ಮುಕ್ತಗೊಳಿಸಲು ಪಣ ತೊಡಗಬೇಕು ಎಂದರು.
ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಸಮೀಪದ ಖಾಸಗ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆರ್ಥಿಕ ದಿವಾಳಿ ಆಗಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಕಿತ್ತೊಗೆದು ಮಾದರಿ ರಾಜ್ಯವನ್ನಾಗಿ ಪರಿವರ್ತನೆಗೊಳಿಸಲು ಆರೂವರೆ ಕೋಟಿ ಜನತೆ ಆಶೀರ್ವಾದ ನನಗೆ ಬೇಕು. ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುವಾಗ ಈ ಬಗ್ಗೆ ನಿಮ್ಮ ಪ್ರಾರ್ಥನೆಯೂ ಇರಲಿ. ಈ ದೇಶಕ್ಕೆ ಜಗತ್ತು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ದೊರೆತಿರುವುದು ನಮ್ಮ ಪೂರ್ವಜನ್ಮದ ಪುಣ್ಯದ ಫಲ ಎಂದರು.
ಈ ಹಿಂದೆ ಅಪ್ಪ ಮಕ್ಕಳ ಪಕ್ಷ ಜೆಡಿಎಸ್ ಅಧಿಕಾರ ಹಸ್ತಾಂತರಕ್ಕೆ ಹಲವು ಶರತ್ತು ವಿಧಿಸಿದಾಗ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ ಜನರ ಬಂದಾಗ ಆಶೀರ್ವದಿಸಿದ ಜನತೆಗೆ ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ, ಸುವರ್ಣ ಭೂಮಿ, ಸಂಧ್ಯಾ ಸುರಕ್ಷೆ, ವಿಧವಾ ವೇತನ, ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ ಸಹಿತ ವಿವಿಧ ಯೋಜನೆ ಒದಗಿಸಿರುವುದನ್ನು ಅವರು ನೆನಪಿಸಿಕೊಂಡರು.
ಜಗತ್ತಿನ ಬಲಿಷ್ಟ ರಾಷ್ಟ್ರ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಶ್ಲಾಘನೆ ವ್ಯಕ್ತಪಡಿಸಿದ ಶ್ರೇಷ್ಟ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ವೃತಾಚರಣೆ ಎಲ್ಲಿ…? ಮೀನು ಮಾಂಸ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ದುರಹಂಕಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಲ್ಲಿ..? ಎಂದು ಅವರು ಲೇವಡಿ ಮಡಿದರು.
ರೂ 2,03,445 ಲಕ್ಷ ಕೋಟಿ ಅನುದಾನ: ಡಿ ವಿ ಎಸ್
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಜಗತ್ತಿನಲ್ಲಿ ಒಂದೇ ಅವಧಿಗೆ ನೋಟು ರದ್ದತಿ, ಜಿಎಸ್ಟಿ, ಡಿಜಿಟಲೀಕರಣಗೊಳಿಸಿದ ಪ್ರಥಮ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ ತುಲನೆ ಮಾಡುವುದು ಹಾಸ್ಯಾಸ್ಪದ ಎಂದರು.

ಕಳೆದ ಕಾಂಗ್ರೆಸ್ ನೇತೃತ್ವದ ಯುಪಿಎ ಸಕರ್ಾರವು 2010-15ರಲ್ಲಿ 13ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ 75,032 ಕೋಟಿ {ಶೇ 32) ಮೊತ್ತದ ಅನುದಾನ ನೀಡಿದೆ. ಆದರೆ 2015-20ರಲ್ಲಿ 14 ನೇ ಹಣಕಾಸು ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸಕರ್ಾರವು ರಾಜ್ಯಕ್ಕೆ ರೂ 2,03,445 ಲಕ್ಷ ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರೂ 1,12,184 ಲಕ್ಷ ಕೋಟಿ ಮೊತ್ತದ ಅನುದಾನ ದೊರೆತಿದೆ ಎಂದರು.
ಈ ಪೈಕಿ ಬೆಂಗಳೂರು ಮೆಟ್ರೊ ಕಾಮಗಾರಿಗೆ ರೂ 8, 719 ಕೋಟಿ, ಸ್ಮಾಟರ್್ ಸಿಟಿಗೆ ರೂ 400 ಕೋಟಿ ಪ್ರಥಮ ಕಂತು, ಸ್ವಚ್ಚ ಭಾರತಕ್ಕೆ ರೂ 1,182 ಕೋಟಿ, ಕುಡಿಯುವ ನೀರಿನ ಯೋಜನೆಗೆ ರೂ 118 ಕೋಟಿ ಪ್ರಥಮ ಕಂತು ನೀಡಿದೆ. ಸಕರ್ಾರದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಯೋಜನೆಯಡಿ ರೂ 2,986 ಕೋಟಿ ಮೊತ್ತದ ಅನುದಾನ ಒದಗಿಸಿದ್ದರೂ ಕೇಂದ್ರ ಸಕರ್ಾರ ಅನುದಾನ ಒದಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮುಸ್ಲಿಮರ ‘ಸುನ್ನತ್’ ನಿಷೇಧಿಸಲಿ: ಈಶ್ವರಪ್ಪ
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರ ಭಕ್ತರ ಕಗ್ಗೊಲೆ ನಡೆಲು ಕುಮ್ಮಕ್ಕು ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಕನಕದಾಸರ ರಕ್ತ ಹರಿಯುವ ಬದಲಾಗಿ ಟಿಪ್ಪುವಿನ ರಕ್ತ ಹರಿದಾಡುತ್ತಿದೆ. ಇದರಿಂದಾಗಿ ಅವರ ಹೆಸರನ್ನು ‘ಟಿಪ್ಪು’ ಎಂದು ಇಟ್ಟುಕೊಳ್ಳುವುದು ಸೂಕ್ತ ಎಂದರು. ಮೂಢನಂಬಿಕೆ ನೆಪದಲ್ಲಿ ಮಠಾಧೀಶರು ದೇಹ ಮುದ್ರೆ ಒತ್ತುವುದು ಮತ್ತು ವೀರಶೈವರು ತ್ರಿಶೂಲ ಚುಚ್ಚಿಸಿಕೊಂಡು ದೇಹಕ್ಕೆ ನೋವು ಉಂಟು ಮಾಡುತ್ತಿರುವುದನ್ನು ನಿಷೇಧಿಸಲು ಮುಂದಾಗಿರುವ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಮುಸ್ಲಿಮರಿಗೆ ದೈಹಿಕ ನೋವು ತರುವ ‘ಸುನ್ನತ್’ ನಿಷೇಧಿಸುವ ಧೈರ್ಯ ತೋರಿಸಲಿ ಎಂದು ಸವಾಲೆಸೆದರು. ಕರಾವಳಿ ಭಾಗದಲ್ಲಿ ಹಿಂದು -ಮುಸ್ಲಿಂ ಭಾವೈಕ್ಯತೆ ಒಡೆಯುವುವುದರ ಜೊತೆಗೆ ಚುನಾವಣೆ ಉದ್ದೇಶದಿಂದ ಲಿಂಗಾಯಿತ ಮತ್ತು ವೀರಶೈವ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಲಿ ಸುಳ್ಳು ಹೇಳುವುದಕ್ಕೆ ಹೆಸರಾದವರು ಎಂದರು. ಕಲ್ಲಡ್ಕ ಭಟ್ಟರನ್ನು ಬಂಧಿಸುವುದರ ಬದಲಾಗಿ ಅವರ ಕೂದಲು ಅಲುಗಾಡಿಸಲು ಕೂಡಾ ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ರೂ 173 ಕೋಟಿ ವೆಚ್ಛದಲ್ಲಿ ಜಾತಿಗಣತಿ ನಡೆಸಿದ ಮುಖ್ಯಮಂತ್ರಿ ಅದನ್ನು ಏಕೆ ಬಹಿರಂಗಪಡಿಸುತ್ತಿಲ್ಲ…? ಎಂದು ಪ್ರಶ್ನಿಸಿದರು.
ಬಂಟ್ವಾಳದಲ್ಲಿ ನೆತ್ತರಕೆರೆ ಎಂಬ ಪ್ರದೇಶವು ಸುಮಾರು 20 ಸಾವಿರಕ್ಕೂ ಮಿಕ್ಕಿ ಕ್ರೈಸ್ತರನ್ನು ಮತಾಂಧ ಟಿಪ್ಪು ಸುಲ್ತಾನ್ ಕೊಂದು ರಕ್ತ ಹರಿಸಿದ ಸ್ಥಳವಾಗಿದೆ ಎಂಬ ‘ಮಂಗಳೂರು ದರ್ಶನ’ ಇತಿಹಾಸ ಸಾರುತ್ತಿದ್ದರೂ ಕೊಲೆಗಾರ ಟಿಪ್ಪು ಜಯಂತಿ ಆಚರಿಸುವುದನ್ನು ಸಮಾಜ ಒಪ್ಪುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಸಚಿವ ರೈ ಚೇಲಾಗಳು ಮರಳು, ಮರ ಕಳ್ಳರು: ಸಂಸದೆ ಕರಂದ್ಲಾಜೆ
ರಾಜ್ಯದಲ್ಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಂತೆ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆ ಅಂಗಳದಿಂದಲೇ ಗಂಧದ ಮರ ಕಳವು ಆದಾಗ ರಕ್ಷಣೆ ನೀಡಲಾಗದ ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಚೇಲಾಗಳು ಸ್ವತಃ ಅಕ್ರಮ ಮರಳು ಮತ್ತು ಮರ ಕಳವು ದಂಧೆಯಲ್ಲಿ ತೊಡಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಇಲ್ಲಿನ ಎಸ್ಪಿ ಎದುರು ಕಲ್ಲಡ್ಕ ಭಟ್ಟರನ್ನು ಬಂಧಿಸುವಂತೆ ಉತ್ತರ ಕುಮಾರನ ಪೌರುಷ ತೋರಿದ ಸಚಿವ ರೈ ಮತ್ತೆ ಏಕೆ ಭಟ್ಟರನ್ನು ಬಂಧಿಸಿಲ್ಲ ಎಂದು ಅವರು ಪ್ರ್ರಶ್ನಿಸಿದರು. ಕಲ್ಲಡ್ಕ ಶಾಲಾ ಮಕ್ಕಳ ಹೊಟ್ಟೆಗೆ ಹೊಡೆದ ಸಚಿವ ರೈಗೆ ಮಕ್ಕಳ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸಿನ ದುಸ್ತಿತಿ ಬಗ್ಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರಂತಹ ಹಿರಿಯ ಮುಖಂಡರೇ ಸ್ವತಃ ಹೇಳಿಕೊಂಡಿದ್ದಾರೆ ಎಂದರು. .
ಪರಿವರ್ತನಾ ರ್ಯಾಲಿ ತ್ಸುನಾಮಿ: ನಳಿನ್
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಬಂಟ್ವಾಳದಲ್ಲಿ ಜನಸಾಗರದ ಅಲೆ ಹುಟ್ಟಿದೆ. ಪರಿವರ್ತನಾ ರ್ಯಾಲಿ ಬೆಂಗಳೂರು ಮುಟ್ಟಿದಾಗ ಸುನಾಮಿಯಾಗಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದರು. ರಾಜ್ಯದಲ್ಲಿ ಭಾಗ್ಯಲಕ್ಷ್ಮಿಯಂತಹ ಜನಪರ ಯೋಜನೆ ಮತ್ತು ಬಂಟ್ವಾಳಕ್ಕೆ ಗರಿಷ್ಟ ಅನುದಾನ ಒದಗಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಸೋತರೂ ನಿರಂತರ ಜನರೊಂದಿಗೆ ಬೆರೆಯುತ್ತಿರುವ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಬೇಕೊ ಬೇಡವೋ ಎಂದು ಇಲ್ಲಿನ ಜನತೆಯೇ ತಿಳಿಸಬೇಕು ಎಂದಾಗ ಕಾರ್ಯಕರ್ತರು ಬೇಕು ಎಂದು ಕೂಗಿದರು.
ಸಂಸದ ಶ್ರೀರಾಮಲು, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾಣರ್ಿಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಆಯನೂರು ಮಂಜುನಾಥ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಮುಖರಾದ ಭಾರತಿ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಳವಿಕ ಅವಿನಾಶ್, ತೇಜಸ್ವಿನಿ ರಮೇಶ ಗೌಡ, ಸುಲೋಚನಾ ಜಿ.ಕೆ.ಭಟ್, ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಕೆ.ಮೋನಪ್ಪ ಭಂಡಾರಿ, ಉಮಾನಾಥ ಕೋಟ್ಯಾನ್, ಸುದರ್ಶನ ಮೂಡುಬಿದಿರೆ, ಸತ್ಯಜಿತ್ ಸುರತ್ಕಲ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ. ಪೂಜಾರಿ, ಸತೀಶ ಕುಂಪಲ, ಕಿರಣ್ ಕುಮಾರ್ ಉಡುಪಿ, , ಚಿತ್ರನಟ ಬುಲೆಟ್ ಪ್ರಕಾಶ ಮತ್ತಿತರರು ಇದ್ದರು.
ಆರಂಭದಲ್ಲಿ ಪರಿವರ್ತನಾ ರ್ಯಾಲಿಯನ್ನು ಸುಮಾರು 5ಸಾವಿರಕ್ಕೂ ಮಿಕ್ಕಿ ಬೈಕ್ ಮತ್ತು 500ಕ್ಕೂ ಮಿಕ್ಕಿ ವಾಹನಗಳ ಮೆರವಣಿಗೆ ಮೂಲಕ ಬಿ.ಸಿ.ರೋಡ್ ಮುಖ್ಯವೃತ್ತ ಸಮೀಪದ ಸಭಾಂಗಣಕ್ಕೆ ಕರೆ ತರಲಾಯಿತು.
ವಿಶೇಷತೆ:
ಹುಲಿ ವೇಷ, ಚೆಂಡೆ, ಕೊಂಬು, ವಾದ್ಯ ವಿಶೇಷ ಮೆರುಗು ನೀಡಿತು. ಮುಂಬೈ ಬಿಜೆಪಿ ಘಟಕ ವತಿಯಿಂದ ಯಡ್ಡಿಗೆ ಬೃಹತ್ ಗಾತ್ರದ ಹಾರಾರ್ಪಣೆ ನಡೆಯಿತು.ಆರ್ ಎಸ್ಎಸ್ ಮುಖಂಡ ಡಾ.ಕೆ. ಪ್ರಭಾಕರ ಭಟ್ ಕಲ್ಲಡ್ಕ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಸಹಿತ ಸುಮಾರು 10ಸಾವಿರಕ್ಕೂ ಮಿಕ್ಕಿ ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳೆಯರು ವಪಾಲ್ಗೊಂಡಿದ್ದರು.
ಪಕ್ಷ ಮುಖಂಡರು ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೆಸರು ಹೇಳಿದಾಗ ಭಾರೀ ಚಪ್ಪಾಲೆ ಮತ್ತು ಜೈಕಾರ ಕೇಳಿ ಬಂತು. ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸ್ವಾಗತಿಸಿ, ಕಾರ್ಯದಶರ್ಿ ಮೋನಪ್ಪ ದೇವಸ್ಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ಕಿಶೋರ್ ಪೆರಾಜೆ.
ಬರಹ ಶ್ರೀಯಾನ್




