ಬಂಟ್ವಾಳ : ಬಂಟ್ವಾಳ ನ್ಯಾಯಾಲಯದಲ್ಲಿ ಸುಧೀರ್ಘ 33ವರ್ಷಗಳ ಕಾಲ ನ್ಯಾಯಾಲಯದ ಅಮೀನರಾಗಿ ಸೇವೆ ಸಲ್ಲಿಸಿದ ಎನ್.ಎಚ್.ಶಂಕರ್ ದಂಪತಿಗಳನ್ನು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀ ಶರಾದ ಚಂದ್ರಶೇಖರ ಯು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್, ವಕೀಲರು ಗಳಾದ ಅಶ್ವನಿ ಕುಮಾರ್ ರೈ, ಗಣೇಶಾನಂದ ಸೋಮಯಾಜಿ, ರಮಾನಾಥ ಕಾರಂದೂರು, ಜಯರಾಮ ರೈ ಉಪಸ್ಥಿತರಿದ್ದರು.
