ಬಂಟ್ವಾಳ : ಸಿದ್ದಕಟ್ಟೆ ರಾಗ ತರಂಗಿಣಿ ಭಜನಾ ಒಕ್ಕೂಟದ ವತಿಯಿಂದ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದಲ್ಲಿ ಅ. 29ರಂದು ಸಂಜೆ ಧರ್ಮ ಜಾಗೃತಿ ಭಜನಾ ಜಾಥಾ ಮತ್ತು ಭಜನಾ ಕಮ್ಮಟ ಜರಗಿತುಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ , ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿದರು.

3010pkt1

3010pkt2
ಅಕ್ಷಯ ಗೋಖಲೆ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು , ಶ್ರೀ ಕ್ಷೇತ್ರ ಕುದ್ರೋಳಿಯ ವಕ್ತಾರ ಹರಿಕೃಷ್ಣ ಬಂಟ್ವಾಳ. ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ರಾಗ ತರಂಗಿಣಿ ಭಜನಾ ಒಕ್ಕೂಟ ಅಧ್ಯಕ್ಷ ರವೀಂದ್ರ ಪೂಜಾರಿ ಬದಿನಡಿ, ಸಂಗಬೆಟ್ಟು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿಗಾರ್, ಪ್ರಧಾನ ಅರ್ಚಕ ಪ್ರಭಾಕರ ಐಗಳ್ ವೇದಿಕೆಯಲ್ಲಿದ್ದರು. ಬಂಟ್ವಾಳ ದೇವದಾಸ್ ಪ್ರಭು ಮತ್ತು ಸಂಗಡಿಗರು ಭಜನೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಜನ ಒಕ್ಕೂಟದಲ್ಲಿರುವ 18 ತಂಡಗಳ ಹಿರಿಯ ಭಜಕರನ್ನು ಸಮ್ಮಾನಿಸಲಾಯಿತು.

ಕಾರ್ಯದರ್ಶಿ ಸಂತೋಷ್ ಕೊಯಿಲ, ಕೋಶಾಧಿಕಾರಿ ನೋಣಯ್ಯ ಶೆಟ್ಟಿಗಾರ್, ಉಪಾಧ್ಯಕ್ಷ ಶಶಿಧರ್ ಶೆಟ್ಟಿ ಹಕ್ಕೇರಿ, ಪದಾ„ಕಾರಿಗಳಾದ ಶಶಿಧರ ಶೆಟ್ಟಿ ಪೂಂಜ, ಭುವನೇಶ್ ಶೆಟ್ಟಿ, ಗೋವರ್ಧನ ಸಂಗಬೆಟ್ಟು, ದಯಾನಂದ ಉಪ್ಪಿರ, ರಾಜೇಶ್ ಹುಲಿಮೇರು, ಆನಂದ ಪೂಜಾರಿ ಕೇಲ್ದೋಡಿ, ಶಾಂತಿ ಕುಮಾರ್, ಅಜಿತ್, ಕೇಶವ ದಡ್ಡಲಕಾಡು ಮತ್ತಿತರರು ಉಪಸ್ಥಿತರಿದ್ದರುಸಮಿತ್ ರಾಯಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ದಿನೇಶ್‍ಸುವರ್ಣ ರಾಯಿ ಪ್ರಸ್ತಾವಿಸಿದರು. ಪ್ರಜ್ವಲ್ ಶೆಟ್ಟಿಗಾರ್ ವಂದಿಸಿದರು. ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *