ಕೈಕಂಬ: ಮೊಗರು ಗುತ್ತು ಫ್ರೆಂಡ್ಸ್ ವತಿಯಿಂದ ಮೊಗರು ಗುತ್ತು ಟ್ರೋಫಿ-2017 ವಾಲಿಬಾಲ್ ಪಂದ್ಯಾಟಕ್ಕೆ ಕೃಷ್ಣ ಜೆ.ಪಾಲೆಮಾರ್ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಮೊಗರು ಗುತ್ತಿನ ಯಜಮಾನ ವಸಂತ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ಡಾ.ವೈ ಭರತ್ ಶೆಟ್ಟಿ, ಬ್ರಿಜೇಶ್ ಚೌಟ,ರಾಜ್ ಕುಮಾರ್ ಶೆಟ್ಟಿ ತಿರುವೈಲ್ ಗುತ್ತು, ಪಾವೇಶ್ ಶೆಟ್ಟಿ ಮೊಗರುಗುತ್ತು ಉಪಸ್ಥಿತರಿದ್ದರು. ಮೊಗರುಗುತ್ತುಫ್ರೆಂಡ್ಸ್ ಹಾಗೂ ಬಿಜೆಪಿಯ ವತಿಯಿಂದ ಮೊಗರು ಅನುದಾನಿತ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಯಶವಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
