ಬಂಟ್ವಾಳ: ಬಂಟರ ಸಂಘ ಸಜೀಪ ವಲಯದ ವತಿಯಿಂದ ವಲಯ ಮಟ್ಟದ ಬಂಟರ ಕ್ರೀಡಾಕೂಟ ಮಿತ್ತಮಜಲು ದೈವಸ್ಥಾನದ ಬಳಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ.ಜಿಲ್ಲಾ.ಪಂಚಾಯತ್ ಅಧ್ಯಕ್ಷ ಬಿ.ಸದಾನಂದ ಪೂಂಜ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಜೀಪ ವಲಯದ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ವೇದಿಕೆಯಲ್ಲಿ ಸಜೀಪಗುತ್ತು ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ ಸಜೀಪ ಮಾಗಣೆ, ಪುಣೆ ಬಂಟ್ಸ್ ಅಸೋಸಿಯೇಶನ್ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಸುಂದರ ಶೆಟ್ಟಿ ಕಂಪದಕೋಡಿ,ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಯುವ ಬಂಟ ಸಂಘಟಕ ನಿಶಾನ್ ಆಳ್ವ, ಕಾರ್ಯಕಾರಿ ಸಮಿಯ ಸದಸ್ಯೆ ರಮಾ ಎಸ್.ಭಂಡಾರಿ , ಉದ್ಯಮಿ ಅಮಿತ್ ಶೆಟ್ಟಿ . ಪ್ರಮುಖರಾದ ದೇವಿಪ್ರಸಾದ್ ಪೂಂಜಾ, ಶಿವ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಆಳ್ವ ಸ್ವಾಗತಿಸಿ, ಚಂದ್ರಶೇಖರ್ ಶೆಟ್ಟಿ ನೀಲ್ಯ ವಂದಿಸಿದರು.


