ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆ ಹಾಗೂ ತಾಲೂಕು ಪಂಚಾಯತ್ ಬಂಟ್ವಾಳ ಇವರ ಸಹಯೋಗದಲ್ಲಿ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಯ ಜೀವ ವೈವಿಧ್ಯ ಸಮಿತಿಯ ಸದಸ್ಯ ರುಗಳಿಗೆ ತರಬೇತಿ ಕಾರ್ಯಕ್ರಮ ತಾಲೂಕು ಪಂಚಾಯತ್ ಎಸ್ .ಜಿ.ಆರ್. ಎಸ್ ವ್ಯೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ದೀಪ ಬಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆದುನಿಕತೆಯ ಜೊತೆಯಲ್ಲಿ ಪರಂಪರೆಯನ್ನು ಮರೆಯುವ ಕೆಲಸ ಯುವ ಜನತೆಯಿಂದ ಆಗುತ್ತಿದೆ. ಜೀವ ವೈವಿಧ್ಯ ಕ್ಕೆ ಮತ್ತೆ ಜೀವ ತುಂಬುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ.ನಾಟಿ ವಿದ್ಯೆ ಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ಅಧಿಕಾರಗಳು ಇಚ್ಚಾಶಕ್ತಿಯಿಂದ ನಾಟಿ ವೈದ್ಯರು ಗಳನ್ನು ಗುರುತಿಸಿ ಅ ಮೂಲಕ ಗ್ರಾಮೀಣ ಜನರಿಗೆ ಸಹಾಯ ಆಗಬೇಕು. ನಾಟಿ ವಿದ್ಯೆ ಮುಂದಿನ ಪೀಳಿಗೆಗೆ ಉಳಿಯಬೇಕು
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ ಬಂಗೇರ. ಸಂಪನ್ಮೂಲ ವ್ಯಕ್ತಿಗಳಾದ ಐಶ್ವರ್ಯ. ನಿರೂಪ್ ಉಪಸ್ಥಿತ ರಿದ್ದರು. ತಾ.ಪಂ.ಕಾರ್ಯ ನಿರ್ವಾಹಣಾಧಿಕಾರಿ ಸಿಪ್ರಿಂಯಾನ್ ಮಿರಾಂದ ಸ್ಬಾಗತಿಸಿ ಪಿಡಿಒ ಆಶೋಕ್ ವಂದಿಸಿದರು
