ವಿಟ್ಲ :ದ ಕ ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಅಭಾವ ಹಾಗೂ ಅಸಮರ್ಪಕ ಮರಳು ನೀತಿಯ ವಿರುದ್ಧ ವಿಟ್ಲ ನಗರ ಬಿಜೆಪಿ ವತಿಯಿಂದ ವಿಟ್ಲ ಗ್ರಾಮ ಕರಣಿಕರ ಕಛೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಜೀವ ಮಠಂದೂರು, ಪುರುಷೋತ್ತಮ ಮುಂಗ್ಲಿಮನೆ, ತಿಮ್ಮಪ್ಪ ಶೆಟ್ಟಿ, ಅರುಣ್ ವಿಟ್ಲ, ಮೋಹನದಾಸ್ ಉಕ್ಕುಡ, ಸೇಸಪ್ಪ ಬೆದ್ರಕಾಡು, ರಾಮದಾಸ ಶೆಣೈ ಹಾಗೂ ಇತರು ಭಾಗವಹಿಸಿದ್ದರು.


