ವಿಟ್ಲ:ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದಗಳೊಂದಿಗೆ, ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಇರಂದೂರು ಶ್ರೀ ನರಸಿಂಹ ದೇವರ ಕ್ಷೇತ್ರದ ಜೀರ್ಣೋದ್ಧಾರದ ಸಮಿತಿ ರಚನೆ ಮತ್ತು ಕ್ಷೇತ್ರದ ನೀಲನಕ್ಷೆ ಬಿಡುಗಡೆ ಕಾರ್ಯಕ್ರಮವು ಕ್ಷೇತ್ರದಲ್ಲಿ ನಡೆಯಿತು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ ನೀಲ ನಕ್ಷೆ ಬಿಡುಗಡೆ ಮಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸದಾಶಿವ ಆಚಾರ್ಯ ಕೈಂತಿಲ, ಕಾರ್ಯದರ್ಶಿಯಾಗಿ ಎಂ ಕೆ ಕುಲಾಲ್, ಕೋಶಾಧಿಕಾರಿಯಾಗಿ ಬಾಲಕೃಷ್ಣ ಗೌಡ ಪೊನ್ನೆತ್ತಡಿ ಹಾಗೂ ಊರಿನ ಪ್ರಮುಖರನ್ನು ಸೇರಿಸಿ ಸಮಿತಿಯನ್ನು ರಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಉದಯೇಶ ಕೆದಿಲಾಯ, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಬಾಲಕೃಷ್ಣ ಕಾರಂತ, ವಿಟ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪ್ರೇಮ, ಸದಾಶಿವ ಆಚಾರ್ಯ ಕೈಂತಿಲ, ಸಂಕಪ್ಪ ಗೌಡ ಕೈಂತಿಲ, ನಾರಾಯಣ ಗೌಡ, ರಾಘವ ಗೌಡ ಅಡ್ಡಾಳಿ, ಪದ್ಮನಾಭ ಗೌಡ ಮಂಜಲಾಡಿ, ಕೃಷ್ಣಪ್ರಕಾಶ್ ಒಕ್ಕೆತ್ತೂರು, ಶ್ರೀನಿವಾಸ ಸಗ್ರಿತ್ತಾಯ ಹಾಗೂ ಕ್ಷೇತ್ರದ ಭಕ್ತಾದಿಗಳು ಭಾಗವಹಿಸಿದ್ದರು. ಪುರಂದರ ಇಂದ್ರಪಡ್ಪು ಪ್ರಾರ್ಥಿಸಿದರು. ಎಂ ಕೆ ಕುಲಾಲ್ ಸ್ವಾಗತಿಸಿದರು. ಹರೀಶ್ ಎಸ್ ಪಿ ವಂದಿಸಿದರು. ದಿನೇಶ್ ಮಾಮೇಶ್ವರ ನಿರೂಪಿಸಿದರು.
