ಉಡುಪಿ: ದಾನ ಮಾಡಲುಉತ್ತಮ ಮನಸ್ಸಿದ್ದರೆ ಸಾಕು ಹಣ ಬೇಕಾಗಿಲ್ಲ ಈ ನಿಟ್ಟಿನಲ್ಲಿ ಅಷ್ಟಮಿ ದಿನ ವಿಶೇóಷವಾದವೇಷ ಧರಿಸಿ ಅದರಿಂದ ಬಂದ ಹಣವನ್ನು ಈ ರೀತಿಯಲ್ಲಿದಾನ ನೀಡುವುದುಅಪೂರ್ವವಾದ ಸೇವೆ ಎಂದು ಖ್ಯಾತ ಛಾಯಾಚಿತ್ರಗಾರ ಗುರುದತ್ತ್ ಕಾಮತ್ ಹೇಳಿದರು.ಅವರುಉಡುಪಿ ಕೋರಂಗ್ರಪಾಡಿಯಲ್ಲಿರುವ ಪಿಲ್ವಾರಿ ವೃದ್ದಾಶ್ರಮದಲ್ಲಿ ನಡೆದ ರಾಮಾಂಜಿಯವರು ಮಾರಿಕಾಡು ವಿಶೇಷ ವೇಷ ಹಾಕಿ ಸಂಗ್ರಹಿಸಿದ ಹಣವನ್ನುಆಶ್ರಮಕ್ಕೆ ನೀಡುವಕಾರ್ಯಕ್ರಮದಲ್ಲಿ ಮಾತನಾಡಿದರು.

01
ಸೇವೆಯಲ್ಲಿಯಾವುದೇ ಫಲಾಪೇಕ್ಷೆಯಿಲ್ಲದೆ ನಮ್ಮ ಖುಷಿಗಾಗಿ ಮಾಡಿದಾಗಅದರಿಂದ ನಮಗೆ ಯಾವುದೇ ಬೇಸರವಾಗುದಿಲ್ಲ ಎಂದಅವರು,ನಮ್ಮದೇಶದಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿರುದಕ್ಕೆಆತಂಕ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು,ನಮ್ಮ ಭೂಮಿಯ ಸ್ಥಾಪಕರಲ್ಲಿಒಬ್ಬರಾದಗಣಪತಿ ಎಂ.ಎಂ, ವೈದ್ಯರಾದಡಾ|| ಕೀರ್ತಿಪಾಲನ್,ಆಶ್ರಮದ ಮೇಲ್ವಿಚಾರಕಕುಮಾರ್ ಮುಂತಾದವರಿದ್ದರು.
ಈ ಸಂದರ್ಭದಲ್ಲಿಗಿಡ ನೆಟ್ಟು ಈ ಕಾರ್ಯಕ್ರಮವನ್ನುಉದ್ಘಾಟಿಸಲಾಯಿತು.ರಾಘವೇಂದ್ರ ಪ್ರಭುಕರ್ವಾಲುಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *