ಬೈಂದೂರು ಕೋಟಿ ಚೆನ್ನಯ ಗರಡಿಗೆ ಗೆಜ್ಜೆಗಿರಿಯ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಬೈಂದೂರು ರಾಜು ಪೂಜಾರಿ ಇವರು ಎಲ್ಲರನ್ನು ಸ್ವಾಗತಿಸಿ ಬೈಂದೂರು ನಮ್ಮ ತುಳುನಾಡಿನ ಕೊನೆಯ ಗರಡಿ ಆಗಿದ್ದು ಈ ಕ್ಷೇತ್ರವು ಜೀರ್ಣೋದ್ಧಾರ ಆಗುತ್ತಿದ್ದು ಕೆಲಸ ಕಾರ್ಯವು ಆ ಕಾರ್ನಿಕ ಶಕ್ತಿಗಳ ಕೃಪೆಯಿಂದ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಮಾತನಾಡಿ ಕ್ಷೇತ್ರದ ಕೆಲಸ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಊರಿನವರ ಸಮಾಜ ಬಾಂಧವರ ಸಹಕಾರವನ್ನು ಯಾಚಿಸಿದರು.

IMG-20171009-WA0083
ಡಾ.ರಾಜಶೇಖರ್ ಕೋಟ್ಯಾನ್ ಆಗಮಿಸುವ ವಿಷಯ ತಿಳಿದ ಅಲ್ಲಿನ ಅಲ್ಲಿನ ಸ್ಥಳೀಯರು ನೂರಾರು ಯುವ ಸಮುದಾಯದ ಕಾರ್ಯಕರ್ತರು ಸಭೆಯಲ್ಲಿ ಸೇರಿದ್ದರು. ಈ ಸಂಧರ್ಭದಲ್ಲಿ ಡಾ.ರಾಜಶೇಖರ್ ಕೋಟ್ಯಾನ್ ಅವರು ಮಾತನಾಡಿ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಕೆಲಸವು ಪ್ರಗತಿಯಲ್ಲಿದ್ದು ಎಲ್ಲರೂ ಕ್ಷೇತ್ರಕ್ಕೆ ಸಂಪೂರ್ಣ ಸಹಕಾರವನ್ನು ನೀಡಬೇಕಾಗಿ ತಿಳಿಸಿದರು. ಅದೇ ರೀತಿ ಬೈಂದೂರು ಕೋಟಿ ಚೆನ್ನಯಯರು ಭೇಟಿ ನೀಡಿದ ಕೊನೆಯ ಗರಡಿ, ಇಲ್ಲಿ ಕೂಡಾ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು ಈ ಗರಡಿ ನಿರ್ಮಾಣಕ್ಕೂ ತಮ್ಮಿಂದ ಆದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಟ್ರಸ್ಟೀ ಸಂತೋಷ್ ಕೋಟ್ಯಾನ್ ಸದಸ್ಯರಾದ ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *