ಬಂಟ್ವಾಳ ತಾಲ್ಲೂಕಿನ ಬಾರೆಕಾಡು-ಕೊಡ್ಮಾಣ್ ಸಂಪರ್ಕ ರಸ್ತೆಗೆ ರೂ 12ಲಕ್ಷ ವೆಚ್ಚದ ಕೊಡ್ಮಾಣ್ ಸಂಪರ್ಕ ರಸ್ತೆಗೆ ಗೆ ಆಹಾರ ಸಚಿವ ಯು.ಟಿ.ಖಾದರ್ ಶುಕ್ರವಾರ ರಾತ್ರಿ ಶಿಲಾನ್ಯಾಸ ನೆರವೇರಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಸಿರ್ ಪೇರಿಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮತ್ತಿತರರು ಇದ್ದರು.
