ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ನಡೆಯುತ್ತಿರುವ 1131ನೇ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಹೃದಯಾಘಾತದಿಂದ ಸಾವನ್ನಪ್ಪಿದ ಶಿಬಿರಾರ್ಥಿ  ಕುಟುಂಬಕ್ಕೆ ಜಿಲ್ಲೆ ಮತ್ತು ತಾಲ್ಲೂಕಿನ ಜನಜಾಗೃತಿ ವೇದಿಕೆ ವತಿಯಿಂದ ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರಧನ ನೀಡಲಾಗುವುದು ಎಂದು ವೇದಿಕೆ ಜಿಲ್ಲಾ ನಿರ್ದೇಶಕ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ.6btl-Samalochane

ತಾಲ್ಲೂಕಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ನಡೆಯುತ್ತಿರುವ 1131ನೇ ಮದ್ಯವರ್ಜನ ಶಿಬಿರ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಸಮಾಲೋಚನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ಧಕಟ್ಟೆ ಹಾರ್ಡ್ರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಮಂಚಕಲ್ಲು ನಿವಾಸಿ ಪ್ರದೀಪ್ ಗೌಡ(26) ಎಂಬವರು ಸ್ವ ಇಚ್ಛೆಯಿಂದ ದುಶ್ಚಟಮುಕ್ತರಾಗಲು ತೀರ್ಮಾನಿಸಿ ಇಲ್ಲಿನ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಗುರುವಾರ ಮಧ್ಯಾಹ್ನ ಎಂದಿನಂತೆ ಊಟ ಮುಗಿಸಿ ವಿಶ್ರಾಂತಿಯಲ್ಲಿದ್ದ ವೇಳೆ ಅವರು ದಿಢೀರನೆ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಕೂಡಾ ಇಲ್ಲಿಯೇ ಇದ್ದರು. ತಕ್ಷಣವೇ ಶಿಬಿರದ ವೈದ್ಯರು ಮತ್ತು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ತಪಾಸಣೆ ನಡೆಸಿದಾಗ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಈ ಹಿಂದೆಯೂ ಪ್ರದೀಪ್ ಹಠಾತ್ ಕುಸಿದು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವೂ ದೊರೆತಿದೆ. ಇದೀಗ ಮಾನವೀಯ ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ನಿಯೋಗವು ಮೃತರ ಮನೆಗೆ ತೆರಳಿ ಅವರ ಕುಟುಂಬಿಕರಿಗೆ ಸಾಂತ್ವನ ವ್ಯಕ್ತಪಡಿಸಿರುವುದಾಗಿ ಅವರು ತಿಳಿಸಿದರು.
ಯೋಜನೆ ನಿರ್ದೇಶಕ ಚಂದ್ರಶೇಖರ ಕೆ., ಸಮಿತಿ ಅಧ್ಯಕ್ಷ ಸಿ.ಶ್ರೀಧರ ಪೈ, ಗೌರವಾಧ್ಯಕ್ಷ ಎಚ್.ಅಮ್ಮು ರೈ ಹರ್ಕಾಡಿ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ನವೀನಚಂದ್ರ ಶೆಟ್ಟಿ, ಯೋಜನಾಧಿಕಾರಿ ಸುನಿತಾ ನಾಯಕ್, ಮೇಲ್ವಿಚಾರಕಿ ಹರಿಣಾಕ್ಷಿ, ಶಿಬಿರಾಧಿಕಾರಿ ವಲಯಾಧ್ಯಕ್ಷ ರತ್ನಾಕರ ಪೂಜಾರಿ, ಪ್ರಮುಖರಾದ ಶಂಕರ ಶೆಟ್ಟಿ ಬೆದ್ರಮಾರು, ಯಶೋಧರ ಶೆಟ್ಟಿ ದಂಡೆ, ಭಾರತಿ ಎಸ್.ಶೆಟ್ಟಿ, ಮೋಹನದಾಸ ಗಟ್ಟಿ, ಎಚ್.ಆನಂದ ಆಚಾರ್ಯ, ಯಶೋಧರ ಸಪಲ್ಯ, ಅರುಣ್ ಕುಮಾರ್ ಇಂದ್ರ, ಜಗದೀಶ ಕೊಯಿಲ, ರಾಘವೇಂದ್ರ ಭಟ್, ಸದಾನಂದ ಸೀತಾಳ, ಜಿತೇಶ ಜೈನ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *