ಉಡುಪಿ: ತಿಂಗಳಿಗೊಮ್ಮೆ ಭೂಮಿಯನ್ನು ಸುತ್ತುವ ನಮ್ಮ ಚಂದ್ರನ ಪಥ ದೀರ್ಘ‌ ವೃತ್ತಾಕಾರ, ಸರಾಸರಿ ತ್ರಿಜ್ಯದ ದೂರ 3,84,000 ಕಿ.ಮೀ. ಹಾಗಾಗಿ ತಿಂಗಳಲ್ಲಿ ಒಮ್ಮೆ ಅತೀ ಸಮೀಪ (3,56,000 ಕಿ.ಮೀ.), ಒಮ್ಮೆ ಅತೀದೂರ (4,06,000 ಕಿ.ಮೀ.)ನಲ್ಲಿ ಚಂದ್ರನಿರುತ್ತಾನೆ. ಸಮೀಪ ಬಂದಾಗ ದೂರದ ಸ್ಥಾನದ ಗೋಚರಕ್ಕಿಂತ ಸುಮಾರು 14 ಶತಾಂಶ ಗಾತ್ರದಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುದುಂಟು. ಸುಮಾರು 30 ಶತಾಂಶ ಪ್ರಭೆ ಹೆಚ್ಚಿದಂತೆ ಕಾಣಿಸಲಿದೆ. ಆ ದಿನ ಹುಣ್ಣಿಮೆಯಾದಲ್ಲಿ ಈ ಗಾತ್ರ ಹಾಗೂ ಪ್ರಭೆಯನ್ನು ಗಮನಿಸಬಹುದು.

moon
ಸುಮಾರು 14 ತಿಂಗಳಿಗೊಮ್ಮೆ ಹುಣ್ಣಿಮೆಯ ದಿನ ಈ ಕನಿಷ್ಠ ದೂರದಲ್ಲಿ ಚಂದ್ರ ಬರುತ್ತಾನೆ. ಅದನ್ನು ಖಗೋಳ ವಿಜಾnನದ ಪರಿಭಾಷೆಯಲ್ಲಿ ಸೂರ್ಯ ಭೂಮಿ ಚಂದ್ರರ ಪೆರಿಜಿ-ಸಿಜಿಗಿ ಅಥವಾ ಸೂಪರ್‌ ಮೂನ್‌ ಎನ್ನುತ್ತಾರೆ. ಆ. 10ರಂದು ಸೂಪರ್‌ಮೂನ್‌ ಹುಣ್ಣಿಮೆ. ಪ್ರಕೃತಿ ಸಹಕರಿಸಿದಲ್ಲಿ ಮೋಡವಿಲ್ಲದ ಚಂದ್ರೋದಯ ಬೆಳ್ಳಂಬೆಳಗಿನ ಚಂದ್ರ ನೋಡಿ ಸಂತೋಷ ಪಡಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಸಂಚಾಲಕ ಡಾ| ಎ.ಪಿ. ಭಟ್‌ ತಿಳಿಸಿದ್ದಾರೆ.

ಭೂಮಿಯಿಂದ ಅತಿ ದೂರಕ್ಕೆ ಬಂದಾಗ ಚಂದ್ರ ಚಿಕ್ಕದಾಗಿ ಕಾಣಿಸುತ್ತಾನೆ. ಆ ಹುಣ್ಣಿಮೆಗೆ ಮೈಕ್ರೋಮೂನ್‌ ಎನ್ನುತ್ತಾರೆ. ಚಂದ್ರ ಭೂಮಿಗೆ ಹತ್ತಿರ ಬಂದಾಗ ಗುರುತ್ವಾಕರ್ಷಣೆಯಿಂದ ಭರತ-ಇಳಿತಗಳಲ್ಲಿ ವ್ಯತ್ಯಾಸ ಆಗಬಹುದು. ಅದು ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ತೆರನಾಗಿರುವುದಿಲ್ಲ. ಹೆಚ್ಚೆಂದರೆ ಕೆಲವು ಇಂಚುಗಳಷ್ಟು ಭರತ-ಇಳಿತಗಳಲ್ಲಿ ವ್ಯತ್ಯಾಸ ಬರಬಹುದಷ್ಟೆ. ಸೂಪರ್‌ಮೂನ್‌ ದಿನ ಇದನ್ನು ಗಮನಿಸಬಹುದು.

By suddi9

Leave a Reply

Your email address will not be published. Required fields are marked *