ಬಂಟ್ವಾಳ : ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಒಕ್ಟೋಬರ್ 1 ರಂದು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸುಂದರ್ ಬಿ.(ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕರು) , ಪ್ರಧಾನ ಕಾರ್ಯದರ್ಶಿಯಾಗಿ ಶೇಷಪ್ಪ ಮಾಸ್ತರ್, ಉಪಾಧ್ಯಕ್ಷರುಗಳಾಗಿ ವಿಠಲ ಬಂಗೇರಾ (ಸಾಮಾಜಿಕ ಕಾರ್ಯಕರ್ತರು). ಸೋಮಯ್ಯ ಎಚ್., (ನಿವೃತ್ತ ವಿಜಯಾ ಬ್ಯಾಂಕ್ ಪ್ರಬಂಧಕರು), ಕೋಶಾಧಿಕಾರಿಯಾಗಿ ಪದ್ಮನಾಭ ಎಂ.(ನಿವೃತ್ತ ಶಿರಸ್ತೇದಾರರು ಕಂದಾಯ ಇಲಾಖೆ) , ಜತೆ ಕಾರ್ಯದರ್ಶಿಯಾಗಿ ರತ್ನಾವತಿ (ನಿವೃತ್ತ ವಿಜಯಾ ಬ್ಯಾಂಕ್ ಪ್ರಬಂಧಕರು) ಹಾಗೂ ಲೆಕ್ಕ ಪರಿಶೋಧಕರಾಗಿ ಲಕ್ಷ್ಮಣ ಮಾರ್ನಬೈಲು (ನಿವೃತ್ತ ಕಂದಾಯ ಇಲಾಖೆ ಅಧಿಕಾರಿ) ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಓಬಯ್ಯ ಮೂಲ್ಯ ರಾಷ್ಟ್ರಪತಿ ವಿಜೇತ ನಿವೃತ್ತ ಅಗ್ನಿಶಾಮಕ ದ ಳ ಅಧಿಕಾರಿ , ಕೃಷ್ಣ ಶ್ಯಾಮ್ ನಿವೃತ್ತ ವಿಭಾಗೀಯ ಅಭಿಯಂತರರು , ಭೋಜ ಬಿ., ಸಾಮಾಜಿಕ ಕಾರ್ಯಕರ್ತರು, ರಾಮಪ್ಪ ಮೂಲ್ಯ ನಿವೃತ್ತ ಅಧೀಕ್ಷಕರು ಮಹಾನಗರಪಾಲಿಕೆ ಮಂಗಳೂರು , ಜನಾರ್ಧನ್ ಸಾಲ್ಯಾನ್ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರು, ಬಿ.ಕೃಷ್ಣಪ್ಪ ಮೂಲ್ಯ ನಿವೃತ್ತ ಪುರಸಭೆ ನೌಕರರು ಆಯ್ಕೆಯಾದರು.

Untitled-1
ನಾಗರಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಎಲ್ಲರಿಗೂ ತಿಳಿಸಿ ಅದರ ಪ್ರಯೋಜನ ಪಡೆಯುವುದು ಹಾಗೂ ಸಂಘಟಿತರಾಗಿ ನಮ್ಮ ಹಕ್ಕುಗಳಿಗೆ ಹೋರಾಟ ಮಾಡುವುದು ಇಂದಿನ ದಿನಗಳಲ್ಲಿ ಅನಿವಾರ್ಯ ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸುಂದರ್ ಬಿ. ನುಡಿದರು. ಬೈಲಾ ಕರಡು ಪ್ರತಿಯನ್ನು ಕೋಶಾಧಿಖಾರಿ ಪದ್ಮನಾಭ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಟಿ.ಶೇಷಪ್ಪ ಮಾಸ್ತರ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *