ಬಂಟ್ವಾಳ:ನವರಾತ್ರಿ ಉತ್ಸವಗಳೆಂದರೆ ಹುಲಿವೇಷಗಳ ಅಬ್ಬರ ಇದ್ದೆ ಇರುತ್ತದೆ.ಮೈಗೆ ಬಣ್ಣವನ್ನು ಹಚ್ಚಿರುವ ಹುಲಿಗಳ ಕುಣಿತವನ್ನು ನೋಡುವುದೆ ಮುದನ್ನುಂಟು ಮಾಡುತ್ತದೆ. ಇಲ್ಲೊಂದು ಹುಲಿ ವೇಷದಾರಿಗಳು ಕುಣಿದು ಸುಸ್ತಾಗಿ ಬಸ್ ನ ಟಾಪ್ ನಲ್ಲಿ ಗಾಢ ನಿದ್ದೆಗೆ ಶರಣಾಗಿರುವುದು ಕಂಡುಬಂದಿದೆ.
ಬಿ.ಸಿ.ರೋಡಿನ ತಂಗುದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ ಟಾಪ್ ನ್ನು ಹತ್ತಿರಯವ ಹುಲಿ ವೇಷದಾರಿಗಳಿಬ್ಬರು ಹಾಯಾಗಿ ಮಲಗಿದ್ದಾರೆ.ಅತ್ತ ಇತರ ಹುಲಿಗಳು ಕುಣಿಯುವುದರಲ್ಲಿ ನಿರತವಾಗಿತ್ತು.
