ಬಂಟ್ವಾಳ: ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಗಳನ್ನು ಆಗ್ರಹಿಸಿ ದ ಕನ್ನಡ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಗ್ರಾಮಲೆಕ್ಕಾಧಿಕಾರಿಗಳ ಸಮಸ್ಯೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರು ಸರಕಾರದಿಂದ ಸಕಾರತ್ಮಕ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಷ್ಕರ ನಡೆಸಲಾಯಿತು, ಸರಕಾರ ಸಕಾಲಿಕ ಸ್ಪಂದಿಸದಿದ್ದಲ್ಲಿ ಹೋರಾಟ ಮುಂದುವರಿಸಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.
ಜಾಬ್ ಚಾರ್ಟ್ ನೀಡಬೇಕು, ಕಂದಾಯ ಇಲಾಖೆಗೆ ಸಚಿವಾಲಯ ನೀಡಬೇಕು, ಹುದ್ದೆಯನ್ನು ಮೇಲ್ದರ್ಜೆ, ಮುಂಭಡ್ತಿ, ಸಮಾನ ವೇತನ ಹುದ್ದೆಗೆ ಸಮಾನ ವೇತನ, ರಜಾ ದಿನಗಳಲ್ಲಿ ಕೆಲಸದ ಒತ್ತಡ ಹಾಕಬಾರದು, ಅನ್ಯ ಇಲಾಖಾ ಕೆಲಸದಿಂದ ಮುಕ್ತಿ, ಪ್ರತೀ ಗ್ರಾಮ ಕೇಂದ್ರದಲ್ಲಿ ವಸತಿ ಸೌಲಭ್ಯ, ಸಕಾಲ ಯೋಜನೆಯಲ್ಲಿರುವ ರ್ಯಾಕಿಂಗ್ ಪದ್ದತಿಯನ್ನು ಕೈ ಬಿಡಬೇಕು. ತಾಂತ್ರಿಕ ಕೆಲಸದಿಂದ ಮುಕ್ತಿ, ಮೊಬೈಲ್ ಆಪ್ ಮುಖಾಂತರ ಬೆಳೆ ಸಮೀಕ್ಷಾ ಕಾರ್ಯವನ್ನು ಕೈ ಬಿಡಬೇಕು. ಗ್ರಾಮಲೆಕ್ಕಾಧಿಕಾರಿಗಳಿಗೆ ಹಲ್ಲೆ ನಡೆಸುವವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಗ್ರಾಮಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರನ್ನು ಗ್ರಾಮಕ್ಕೆ ಬಿಡುಗಡೆಗೊಳಿಸಬೇಕು. ಗ್ರಾಮ ಸಹಾಯಕ ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಗ್ರಾಮ ಲೆಕ್ಕಾಧಿಕಾರಿಗಳು ಒತ್ತಾಯಿಸಿದರು. ಜಿಲ್ಲಾಧಿಕಾರಿ ಡಾ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಾದ್ಯಂತ ನಡೆಯುತ್ತಿರುವ ಈ ಮುಷ್ಕರದಲ್ಲಿ ಎಲ್ಲಾ ತಾಲೂಕು ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಪಾಲ್ಗೊಂಡರು.

* ಸರಕಾರ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತಂದರು ಸಾರ್ವಜನಿಕರಿಗೆ ಹತ್ತಿರದಿಂದ ಮುಟ್ಟಿಸುವ ಕೆಲಸವನ್ನು ಗ್ರಾಮ ಲೆಕ್ಕಾಧಿಕಾರಿಗಳು ಮಾಡುತ್ತಿದ್ದು ನಮ್ಮ ಗ್ರಾಮ ಕರಣಿಕರು ಹಲವು ಬೇಡಿಕೆಗಳನ್ನು ಹಿಡೇರಿಕೆ ಮಾಡುವಂತೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿ ಸಲ್ಲಿಸಿದರು ಸರಕಾರ ಸಕರಾತ್ಮವಾಗಿ ಸ್ಪಂದಿಸಿರುವುದಿಲ್ಲ ಆದ್ದರಿಂದ ರಾಜ್ಯ ಸಂಘದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಸಂಕೇತಿಕ ಮುಷ್ಕರವನ್ನು ನಡೆಸಿದೆವು.
* ಜನಾರ್ಧನ ಗ್ರಾಮ ಲೆಕ್ಕಾಧಿಕಾರಿ.
ಗ್ರಾಮ ಮಟ್ಟದಲ್ಲಿ ಗ್ರಾಮ ಸಹಾಯಕರು ಒಬ್ಬರೇ ಗ್ರಾಮ ಲೆಕ್ಕಾಧಿಕಾರಿಯವರಿಗೆ ಬೆನ್ನೆಲುಬಾಗಿ ಇದ್ದು ಆದರೂ ಅವರು ಖಾಯಂ ನೌಕರರು ಆಗಿರುವುದಿಲ್ಲ ಆದ್ದರಿಂದ ಅತೀ ಶೀಘ್ರದಲ್ಲಿಯೇ ಗ್ರಾಮ ಸಹಾಯಕರನ್ನು ಖಾಯಂ ಸರಕಾರಿ ನೌಕರರನ್ನಾಗಿ ಮಾಡಬೇಕು ಎಂಬುದು ನಮ್ಮ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆ ಆಗಿದೆ.
