ಕೈಕಂಬ: ಮಹಿಳಾ ಬ್ಲಾಕ್ ಕಾಂಗ್ರೇಸ್ ಹಾಗೂ ರೈಡರ್ ಫ್ರೆಂಡ್ಸ್ ಕ್ಲಬ್ ಕಾಂಜಿಲಕೋಡಿ ಇವರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ “ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ, ನೇತ್ರ ತಪಾಸಣಾ ಶಿಬಿರ ಹಾಗೂ ದಂತ ತಪಾಸಣಾ ಶಿಬಿರವು ಸೆ.27 ರಂದು ಬುಧವಾರ ಬೆಳಿಗ್ಗೆ ಘಂಟೆ 9-30 ರಿಂದ 1-30ರ ವರೆಗೆ ಅಡ್ಡೂರು, ಕಾಂಜಿಲಕೋಡಿ, ಬದ್ರುಲ್ ಹುದಾ ಜುಮ್ಮಾ ಮಸೀದಿ ಸಭಾಂಗಣದಲ್ಲಿ ಜರುಗಲಿದೆ.
ಸಭಾಕಾರ್ಯಕ್ರಮ:
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಹಿಯುದ್ದೀನ್ ಬಾವ, ಬಜಪೆ ಪೊಲೀಸ್ ಠಾಣಾ ಎಸ್. ಐ. ರಾಜರಾಮ್ ಜಿ.ಪಂ ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ.ಸದಸ್ಯ ಸಚಿನ್ ಅಡಪ,ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಕೆ.ಪಿಸಿ.ಸಿ ಸದಸ್ಯ ಆರ್. ಕೆ. ಪೃಥ್ವಿರಾಜ್,  ಯುವ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಆಳ್ವ ,  ಗುರುಪುರ ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ   ಸಲೀನ್ ಫೆರ್ನಾಂಡಿಸ್,  ಗುರುಪುರ ಮಹಳಾ ಕಾಂಗ್ರೇಸ್ ಉಪಾಧ್ಯಕ್ಷೆ   ಜಯಲಕ್ಷ್ಮೀ ಸುಭಾಸ್ ಚಂದ್ರ, ಗುರುಪುರ ಗ್ರಾ.ಪಂ.ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ.ಎಮ್.ಉದಯ ಭಟ್, ರೈಡರ್ಸ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಹನೀಪ್,  ಸುರತ್ಶಲ್ ಮಹಿಳ ಕಾಂಗ್ರೇಸ್ ಅಧ್ಯಕ್ಷೆ  ಶಕುಂತಳಾ,  ಬದ್ರಲ್ ಹುದಾಜುಮ್ಮಾ ಮಸೀದಿ ಕಾಂಜಿಲಕೋಡಿ ಅಹಮದ್ ಬಾವ,  ಎಡ್ಮಿನ್ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇಮ್ರಾನ್ ಅಡ್ಡೂರು, ಕಾಂಜಿಲಕೋಡಿ ಬದ್ರಲ್ ಹುದಾಜುಮ್ಮಾ ಮಸೀದಿ  ಅಧ್ಯಕ್ಷ ಎಮ್.ಯಚ್. ಮೈಯದಿ, ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ  ರುಕ್ಮಯಾ ಉಳಿಯ, ಹಸನ್ ನೂಯಿ, ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *