ಬಂಟ್ವಾಳ: ಬಂಟ್ವಾಳ ತಾಲೂಕು ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿ (ರಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇದರ 2016-17 ಸಾಲಿನ ವಾರ್ಷಿಕ ಮಹಾಸಭೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯ ಯೋಜನಾಧಿಕಾರಿ ಮಲ್ಲಿಕಾ ಅವರು ಮಹಿಳೆಯರ ಸಬಲೀಕರಣಕ್ಕೆ ಆರ್ಥಿಕ ವ್ಯವಸ್ಥೆ ಪ್ರಮುಖ ಪಾತ್ರವಹಿಸುತ್ತದೆ.
ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿ ಅರ್ಥಿಕ ಸ್ಥೆರ್ಯ ತುಂಬುವ ಕೆಲಸ ಮಾಡಿದೆ, ಸ್ತ್ರಿಯರ ಸರ್ವತೋಮುಖ ಬೆಳವಣಿಗೆಯ ಜೊತೆ ವಿವಿಧ ಸಮಾಜ ಮುಖಿ ಕೆಲಸಗಳನ್ನು ಕೈಗೊಂಡಿದೆ, ಮಹಿಳೆಯರ ಧ್ವನಿಯಾಗಿರುವ ಸೊಸೈಟಿ ಇನ್ನಷ್ಟು ಅಭಿವೃದ್ದಿಯನ್ನು ಕಾಣಲಿ ಎಂದು ಶುಭ ಹಾರ್ಯೆಸಿದರು. ವೇದಿಕೆಯಲ್ಲಿ ಹಿರಿಯ ಮೇಲ್ವಿಚಾರಕಿಯರಾದ ಪುಷ್ಪಲತಾ, ಉಷಾ, ಭಾರತಿ , ಸೊಸೈಟಿಯ ಉಪಾಧ್ಯಕ್ಷರಾದ ಪುಷ್ಪಾ ಎಮ್, ಕೊಶಾಧಿಕಾರಿ ಜಲಜಾಕ್ಷಿ, ಸದಸ್ಯರಾದ ಭಾರತಿ, ಲೀಲಾವತಿ, ಗಾಯತ್ರಿ, ಲಲಿತಾ, ಪ್ರೇಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿಯರು ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷೆ ಶರತ್ ಶೆಟ್ಟಿ ವರದಿ ಮಂಡಿಸಿದರು. ಸೊಸೈಟಿಯ ಕಾರ್ಯದರ್ಶಿ ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಸ್ವಾಗತಿಸಿ ಮೇಲ್ವಿಚಾರಕಿ ಸಿಂದೂ ವಂದಿಸಿದರು.
