ಸುದ್ದಿ9ಬಂಟ್ವಾಳ ಪುರಸಭೆ ವ್ಯಾಪ್ತಿಯ ಕಲ್ಲಗುಡ್ಡೆ ಎಂಬಲ್ಲಿ ಏಳು ಮಂದಿ ಖರೀದಿಸಿದ್ದ ಒಟ್ಟು 1.75ಎಕ್ರೆ ಜಮೀನು ಅಗೆದು ಸಮತಟ್ಟುಗೊಳಿಸಿದ ಪರಿಣಾಮ ಸ್ಥಳೀಯ 12 ಮನೆಗಳು ಕುಸಿತದ ಭೀತಿ ಎದುರಿಸುತ್ತಿದ್ದರೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ತನಕ ಭೂಮಾಲೀಕರಿಗೆ ಯಾವುದೇ ರೀತಿಯ ಕಟ್ಟಡ ನಿಮರ್ಾಣಕ್ಕೆ ಅವರಿಗೆ ಪರವಾನಿಗೆ ನೀಡಬಾರದು ಎಂದು ವಿರೋಧ ಪಕ್ಷ (ಬಿಜೆಪಿ) ಸದಸ್ಯ ಬಿ.ದೇವದಾಸ ಶೆಟ್ಟಿ ಆಗ್ರಹಿಸಿದರು. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಈ ಬಗ್ಗೆ ವಿರೋಧ ಪಕ್ಷ (ಬಿಜೆಪಿ)ಸದಸ್ಯ ಬಿ.ದೇವದಾಸ ಶೆಟ್ಟಿ ಮತ್ತು ಎ.ಗೋವಿಂದ ಪ್ರಭು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಎಲ್ಲರೂ ಧ್ವನಿಗೂಡಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 13ಸಾವಿರಕ್ಕೂ ಮಿಕ್ಕಿ ಮನೆಗಳಿದ್ದರೂ ಕೇವಲ 5ಸಾವಿರ ಮನೆಗೆ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿದ್ದು, ಉಳಿದಂತೆ ಅನಧಿಕೃತ ಸಂಪರ್ಕ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುರಸಭೆ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪುರಸಭಾ ವ್ಯಾಪ್ತಿಯ ಎಲ್ಲಾ ಕುಡಿಯುವ ನೀರಿನ ಪೈಪ್ ಸಂಪರ್ಕ ಮತ್ತು ಗೇಟ್ವಾಲ್ ಬಗ್ಗೆ ಇಲ್ಲಿನ ಎಂಜಿನಿಯರ್ ಮತ್ತು ಅಧಿಕಾರಿಗಳಿಗೆ ಮಾಹಿತಿ ಗೊತ್ತಿಲ್ಲ. ಇದಕ್ಕಾಗಿ ಕೇವಲ ಇಬ್ಬರು ಗುತ್ತಿಗೆದಾರರನ್ನು ಅವಲಂಬಿಸುವುದನ್ನು ತಪ್ಪಿಸಲು ಸೂಕ್ತ ದಾಖಲೆ ಪುಸ್ತಕ ಸಿದ್ಧಪಡಿಸಿ ಎಂದು ಸದಸ್ಯ ಬಿ.ದೇವದಾಸ ಬಂಟ್ವಾಳ್ ಸಲಹೆ ನೀಡಿದರು. ಕಳೆದ ಒಂದು ವರ್ಷದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪುರಸಭೆ ನಿರ್ವಹಣೆ ನೆಪದಲ್ಲಿ ರೂ 1ಕೋಟಿಗೂ ಮಿಕ್ಕಿ ಅನುದಾನ ವ್ಯಯಿಸಲಾಗಿದೆ. ಕೆಲವೊಂದು ಕಾಮಗಾರಿಗಳಿಗೆ ಅನಾಮಿಕ ಹೆಸರಿನಲ್ಲಿ ಟೆಂಡರ್ ನೀಡುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಅಸಮರ್ಪಕ ತ್ಯಾಜ್ಯ ವಿಲೇವಾರಿ ಮತ್ತು ಅಕ್ರಮ ಕ್ರಿಯಾಯೋಜನೆ ಸಿದ್ಧಪಡಿಸಿಸಿರುವ ಬಗ್ಗೆ ಆರೋಪಿಸಿ ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಪ್ರತೀ ಸಭೆಯಲ್ಲಿಯೂ ತ್ಯಾಜ್ಯ ಮತ್ತು ಕುಡಿಯುವ ನೀರಿನ ಬಗ್ಗೆ ಚಚರ್ೆ ನಡೆಸಲಾಗುತ್ತಿದ್ದು, ಯಾವುದೇ ಪ್ರಯೋಜನವಾಗುತ್ತ್ತಿಲ್ಲ ಎಂದು ಎಸ್ಡಿಪಿಐ ಸದಸ್ಯ ಮುನೀಷ್ ಆಲಿ ಆರೋಪಿಸಿದರು. ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಜಗದೀಶ ಕುಂದರ್, ವಾಸು ಪೂಜಾರಿ, ಪ್ರವೀಣ ಜಕ್ರಿಬೆಟ್ಟು ಮತ್ತಿತರರು ಚಚರ್ೆಯಲ್ಲಿ ಪಾಲ್ಗೊಂಡರು. ಪುರಸಭಾಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಯಾಸ್ಮಿನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸಮೂಹ ಅಭಿವೃದ್ಧಿ ಅಧಿಕಾರಿ ಮತ್ತಡಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪ್ರಭಾದೇವಿ, ಅಬ್ದುಲ್ ರಝಾಕ್, ರಾಜಶೇಖರ್ ಮತ್ತಿತರರು ಇದ್ದರು. —
