ಬಂಟ್ವಾಳ: ಸಾಹಿತ್ಯ, ಕ್ರೀಡೆ, ಆರೋಗ್ಯ, ಸಾಂಸ್ಕøತಿಕ, ಸಾಮೂಹಿಕ ವಿವಾಹ ಮೊದಲಾದ ಸಮಾಜಮಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ತನ್ನ 33ನೇ ವರ್ಷಾಚರಣೆಯ ಪ್ರಯುಕ್ತ ವಿದ್ಯುತ್ ರಹಿತ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ.
ತಾಲೂಕಿನ ಪಿಲಾತಬೆಟ್ಟು, ಇರ್ವತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ವಿದ್ಯುತ್ ರಹಿತ 15 ಮನೆಗಳನ್ನು ಗುರುತಿಸಿ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮನೆಗಳಲ್ಲಿ ಬೆಳಕು ಮೂಡಿಸಿದೆ. 2015ರಲ್ಲಿ ಪಿಲಾತಬೆಟ್ಟು ಗ್ರಾಮದ ದುಗಮಾರು ಗುಡ್ಡೆ ಕೊರಗರ ಕಾಲನಿಗೆ ರೋಟರಿ ಕ್ಲಬ್ ಮತ್ತು ದ.ಕ. ಜಿ.ಪಂ.ಸಹಯೋಗದಲ್ಲಿ ಕ್ಲಬ್ ವತಿಯಿಂದ 9 ಮನೆಗಳನ್ನು ನಿರ್ಮಿಸಿ ಕೊಡಲಾಗಿತ್ತು. ಅವುಗಳಲ್ಲಿ ಕೆಲವು ಮನೆಗಳಿಗೆ ಕಾನೂನು ತೊಡಕಿನಿಂದ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿರಲಿಲ್ಲ.
ಇದನ್ನು ಮನಗಂಡ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ ಸ್ಥಾಪಕಾಧ್ಯಕ್ಷ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಕಾನೂನು ತೊಡಕನ್ನು ನಿವಾರಿಸಿ, ದಾನಿಗಳ ಸಹಕಾರದಿಂದ ಎಲ್ಲಾ 9 ಮನೆಗಳಿಗೆ ಸಂಪೂರ್ಣ ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಮೂಡುಪಡುಕೋಡಿ ಗ್ರಾಮದ ಪಂಜೋಡಿ ಜಯಲಕ್ಷ್ಮೀ ಚಂದ್ರಶೇಖರ ಆಚಾರ್ಯ, ಇರ್ವತ್ತೂರು ಕಲ್ಲಡ್ಕ ಅಬ್ದುಲ್ ಕರೀಂ, ಮೂರ್ಜೆಯ ಉಮಾವತಿ, ಪಿಲಾತಬೆಟ್ಟು ಗ್ರಾಮದ ಕನಲ್ದಪಲ್ಕೆಯ ಪರಿಶಿಷ್ಟ ಪಂಗಡದ 4 ಮನೆಗಳಿಗೆ ವಿದ್ಯುತ್ ಬೆಳಕಿನೆ ಆಸರೆ ನೀಡಿದ್ದಾರೆ. ದುಗಮಾರು ಗುಡ್ಡೆ ಕೊರಗ ಕಾಲನಿಯ ಸುಶೀಲ ಅವರ ಮನೆಯಲ್ಲಿ ವಿದ್ಯುದ್ದೀಕರಣಕ್ಕೆ ಚಾಲನೆ ನೀಡಿದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ ಸದಸ್ಯರು ಬಳಿಕ ಎಲ್ಲಾ ಮನೆಗಳಿಗೂ ತೆರಳಿ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮನೆಮಂದಿಗೆ ಹಸ್ತಾಂತರಿಸಿದರು
ಬಳಿಕ ಪಿಲಾತಬೆಟ್ಟು ಗ್ರಾ.ಪಂ.ನ ಸಭಾಂಗಣದಲ್ಲಿ ನಡೆದ ಕೃತಜ್ಞಾತ ಸಮರ್ಪಣ ಸಭೆಯಲ್ಲಿ ನೆರವು ನೀಡಿದ ದಾನಿಗಳಿಗೆ ಗೌರವಾರ್ಪಣೆಸ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ತುಂಗಪ್ಪ ಬಂಗೇರ ಪಿಲಾತಬೆಟ್ಟು ಗ್ರಾ,ಪಂ. ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಸಂಪೂರ್ಣ ವಿದ್ಯದ್ದೀಕರಣಗೊಳಿಸುವ ನಿಟ್ಟಿನಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮೂಲಕ ಬಡಕುಟುಂಬಗಳಿಗೆ ವಿದ್ಯುತ್ ಒದಗಿಸುವ ಕಾರ್ಯ ಮಾಡಿದೆ. 9 ಮನೆಗಳಿಗೆ ಮನೆ ನಿರ್ಮಾಣಕ್ಕೂ ಕ್ಲಬ್ ಆರ್ಥಿಕ ನೆರವು ನೀಡಿದೆ. ಸರಕಾರದ ಜೊತೆಗೆ ಸಂಘಟನೆಗಳು ಕೈ ಜೋಡಿಸಿದಾಗ ಗ್ರಾಮ ಸ್ವರಾಜ್ಯವಾಗಲು ಸಾಧ್ಯವಿದೆ ಎಂದರು ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಅವರು ಮಾತನಾಡಿ ಸಾಮಾಜಿಕವಾಗಿ ಹಿಂದುಳಿದವರನ್ನು ಸಶಕ್ರನ್ನಾಗಿಸುವ ನಿಟ್ಟಿನಲ್ಲಿ ಸಂಘಟನೆಗಳ ಮೂಲಕ ಯುವಕರನ್ನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯ ಮಾಡುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕಾರ್ಯ ಅಭಿನಂದನೀಯ. ಪಿಲಾತಬೆಟ್ಟು ಸೇವಾ ಸಹಕಾರಿ ಸಂಘ ಈ ಕಾರ್ಯದೊಂದಿಗೆ ಕೈ ಜೋಡಿಸಲಿದೆ ಎಂದರು. ಇದೇ ವೇಳೆ ವಿದ್ಯುತ್ ಕಾಮಗಾರಿಗೆ ಸಹಕರಿಸಿದ ಜಗನ್ನಾಥ್ ಬಂಟ್ವಳ್ ಹಾಗೂ ಸಂತೋಷ್ ಮೂರ್ಜೆ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್, ಪಿಲಾತಬೆಟ್ಟು ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ನಾಯ್ಕ, ವಾಮದಪದವು ಸಿ.ಎ.ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪಿಡಿಓ ಬಾಲಕೃಷ್ಣ ಪೂಜಾರಿ, ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ್ ಶೆಟ್ಟಿ, ಪಿಲಾತಬೆಟ್ಟು ಗ್ರಾ.ಪಂ. ಸದಸ್ಯರಾದ ಯೋಗೇಂದ್ರ, ನಾರಾಯಣ, ದಯಾನಂದ, ಮಾಜಿ ಸದಸ್ಯ ರವಿಶಂಕರ್ ಹೊಳ್ಳ ಉಪಸ್ಥಿತರಿದ್ದರು.
