ವಿಟ್ಲ ಜೆಸಿಐ ಘಟಕದ ಸಪ್ತಾಹ 2017 ಇದರ ಸಮಾರೋಪ ಸಮಾರಂಭವು ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ಘಟಕದ ಅಧ್ಯಕ್ಷ ರಮೇಶ್ ಬಿ ಕೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಶ್ರೀ ನಾರಾಯಣ ಗುರ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ವಲಯ ನಿರ್ದೇಶಕ ಸತೀಶ್ ಪೂಜಾರಿ, ವಲಯ ಉಪಾಧ್ಯಕ್ಷ ಮೋಹನ ಎ, ವಿಟ್ಲ ಟೋಪ್ಕೊ ಜುವೆಲ್ಲರಿ ಪಾಲುದಾರ ಮಹಮ್ಮದ್ ಟಿ ಕೆ, ನಿಕಟ ಪೂರ್ವ ಅಧ್ಯಕ್ಷ ಬಾಬು ಕೊಪ್ಪಳ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕ ತನಿಯಪ್ಪ ಮೂಲ್ಯ ಮತ್ತು ರಾಷ್ಟ್ರ ಮಟ್ಟದ ಈಜು ಪಟು ಈಶ್ವರ ಭಟ್ ರವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರು ಸ್ವಾಗತಿಸಿ ನಿರ್ವಹಿಸಿದರು. ಕಾರ್ಯದರ್ಶಿ ರಾಜಶೇಖರ್ ವಂದಿಸಿದರು.



