Published On: Sat, Sep 16th, 2017

ಮ್ಯಾನ್ಮರ್‍ನಲ್ಲಿ ರೋಹಿಂಗ್ಯಾ ಜನರ ಮೇಲಿನ ಕ್ರೌರ್ಯ, ರಕ್ತಪಾತದ ವಿರುದ್ದ ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ದೇರಳಕಟ್ಟೆಯಲ್ಲಿ ಪ್ರತಿಭಟನೆ

ಉಳ್ಳಾಲ. ಮ್ಯಾನ್ಮರ್‍ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಮಾರಣ ಹೋಮದ ಬಗ್ಗೆ ಎಸ್.ಡಿ.ಪಿ.ಐ ಅತೀವ ಕಾಳಜಿ ಮತ್ತು ದುಃಖವನ್ನು ವ್ಯಕ್ತಪಡಿಸುತ್ತದೆ. ಮ್ಯಾನ್ಮರ್‍ನಲ್ಲಿ ಬೌದ್ಧ ಉಗ್ರವಾದಿಗಳು ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಸುತ್ತಿರುವ ಕ್ರೌರ್ಯ ಕಳವಳಕಾರಿಯಾದುದ್ದು ಮತ್ತು ಹೃದಯ ವಿದ್ರಾವಕವಾದುದು. ಮ್ಯಾನ್ಮರ್ ಸರಕಾರದ ಆದೇಶದ ಮೇರೆಗೆ ಆ ದೇಶದ ಸೈನ್ಯ ಮತ್ತು ಅರಕಾನ್ ಬೌದ್ಧರು ರೋಹಿಂಗ್ಯಾ ಮುಸ್ಲಿಮರನ್ನು ಸರ್ವನಾಶ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯು 2011ರಿಂದ ನಿರಂತರವಾಗಿ ಜಾರಿಯಲ್ಲಿದ್ದು ಸಾವಿರಾರು ಮುಸ್ಲಿಮರನ್ನು ಕತ್ತರಿಸಿ ಹಾಕಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಮತ್ತು ಅವರ ಮನೆ, ಮಸೀದಿಗಳನ್ನು ಸುಡಲಾಗಿರುತ್ತದೆ. ಈ ತೀವ್ರವಾದ, ಕೊನೆಯಿಲ್ಲದ ಆಕ್ರಮಣಗಳಿಂದ ಭಯಭೀತರಾದ ರೋಹಿಂಗ್ಯಾ ಸಮುದಾಯವು ನೆರೆ ದೇಶಗಳಾದ ಬಾಂಗ್ಲಾದೇಶ, ಮಲೇಶ್ಯ, ಇಂಡೋನೇಶ್ಯ ಮತ್ತು ಭಾರತದಂತಹಾ ರಾಷ್ಟ್ರಗಳಿಗೆ ತಮ್ಮ ಮನೆ ಮಠ ತೊರೆದು ಧಾವಿಸುತಿದ್ದಾರೆ. ಸಮುದ್ರದ ಮೂಲಕ ದೋಣಿಗಳಲ್ಲಿ ಪಲಾಯಣ ಮಾಡುತ್ತಿದ್ದ ಸಾವಿರಾರು ರೋಹಿಂಗ್ಯಾಗಳು ಮುಳುಗಿ ಸತ್ತಿರುವ ಘಟನೆಗಳು ನಡೆದಿದೆ. ಅಸಾಹಯಕ ರೋಹಿಂಗ್ಯಾ ಮುಸ್ಲಿಮರು ಪ್ರಾಣ ಉಳಿಸಿಕೊಳ್ಳಲು ತಮ್ಮ ತಮ್ಮ ಗ್ರಾಮ ತೊರೆದು ಬೆಟ್ಟಗುಡ್ಡಗಳನ್ನು ದಾಟಿ ನೂರಾರು ಮೈಲಿ ನಡೆದು ಬಂದಿರುತ್ತಾರೆ. ಮ್ಯಾನ್ಮಾರ್ ಸರಕಾರವು ಶತಮಾನಗಳಿಂದ ಶಾಶ್ವತವಾಗಿ ವಾಸಮಾಡಿಕೊಂಡು ಬರುತ್ತಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಮ್ಮ ದೇಶದ ನಾಗರೀಕರು ಎಂದು ಪರಿಗಣಿಸದೆ ಅವರ ಮಾನವ ಹಕ್ಕುಗಳನ್ನು ನಿರಾಕರಿಸುತ್ತಿರುವುದೇ ಈ ಘಟನೆಗಳಿಗೆ ಮೂಲ ಕಾರಣವಾಗಿದೆ ಎಂದು ಎಸ್‍ಡಿಪಿಐ ರಾಜ್ಯ ಸದಸ್ಯ ಅಸ್ಲಂ ಹಸನ್ ಹೇಳಿದರು.

IMG_20170915_135723
ಅವರು ರೋಹಿಂಗ್ಯಾ ಜನಾಂಗೀಯ ಹತ್ಯೆಯ ವಿರುದ್ದ ವಿಶ್ವಸಂಸ್ಥೆ ತನ್ನ ಮಿಲಿಟರಿ ಶಕ್ತಿಯನ್ನು ಬಳಸಬೇಕು, ಮ್ಯಾನ್ಮಾರ್ ಸರಕಾರವು ರೋಹಿಂಗ್ಯಾ ಜನಾಂಗವನ್ನು ತನ್ನ ದೇಶದ ನಾಗರೀಕರೆಂದು ಪರಿಗಣಿಸಬೇಕು ಮತ್ತು ರೋಹಿಂಗ್ಯಾ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಪರಿಹಾರವನ್ನು ಘೋಷಿಸಿ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಆಗ್ರಹಿಸಿ ದೇಶದಾದ್ಯಂತ ನಡೆಸುವ “ರೋಹಿಂಗ್ಯಾ ಹತ್ಯಾಕಾಂಡವನ್ನು ನಿಲ್ಲಿಸಿ” ಎಂಬ ಘೋಷಣೆಯೊಂದಿಗೆ ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ದೇರಳಕಟ್ಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

IMG_20170915_135719

ಮ್ಯಾನ್ಮರ್‍ನ ನೆರೆಯ ದೇಶ ಕೂಡ ಈ ನಿರಾಶ್ರಿತ ರೋಹಿಂಗ್ಯಾಗಳಿಗೆ ಆಶ್ರಯ ನಿರಾಕರಿಸುತ್ತಿರುವು ಗಂಭೀರ ವಿಷಯವಾಗಿದೆ. ಹಾಗೂ ಮ್ಯಾನ್ಮರ್‍ನ ಹದಗೆಟ್ಟಿರುವ ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ನಿರಾಶ್ರಿತರಾಗಿ ವಲಸೆ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ಪುನಃ ಅಲ್ಲಿಗೆ ವಾಪಾಸು ಕಳುಹಿಸ ಬೇಕೆಂಬ ಕೇಂದ್ರ ಸರಕಾರದ ನಿರ್ಧಾರವು ಮಾನವ ವಿರೋಧಿಯಾಗಿದೆ ಮತ್ತು ರೋಹಿಂಗ್ಯಾ ಸಮುದಾಯದ ಮೇಲಿನ ಕೌರ್ಯದ ಬಗ್ಗೆ ಭಾರತ ಸರಕಾರವು ಮೌನವಾಗಿರುವುದು ನಾಚಿಕೆಗೇಡಿನ ವಿಷಯವಾಗಿದ್ದು ವಿಶ್ವಸಂಸ್ಥೆ ಮತ್ತು ಅಭಿವೃದ್ದಿ ಹೊಂದಿದ ದೇಶಗಳು ಪ್ರಭುತ್ವದ ಪ್ರಾಯೋಜಿತ ಭಯೋತ್ಪಾಧನೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಖಂಡನಾರ್ಹವಾಗಿರುತ್ತದೆ ಎಂದು ಎಸ್.ಡಿ.ಪಿ.ಐ ಪಕ್ಷವು ಅಭಿಪ್ರಾಯ ಪಡುತ್ತದೆ ಎಂದು ಹೇಳಿದರು.
ಪಿಎಫ್‍ಐ ದ.ಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಉಳ್ಳಾಲ ವಲಯಾಧ್ಯಕ್ಷ ಸಿದ್ದೀಕ್ ಯು.ಬಿ, ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯಾ, ಕಾರ್ಯದರ್ಶಿ ಹಾರಿಸ್ ಮಲಾರ್, ಸದಸ್ಯರಾದ ನೌಷಾದ್ ಕಲ್ಕಟ್ಟ, ಇರ್ಶಾದ್ ಕೆ.ಸಿರೋಡು, ಝಾಹಿದ್ ಮಲಾರ್, ಬಶೀರ್ ಅಜಿನಡ್ಕ, ರವೂಫ್ ಉಳ್ಳಾಲ್ ಮುಂತದವರು ಈ ಸಂದರ್ಭ ಉಪಸ್ಥಿತರಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter