ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಪ.ಪೂ. ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸ್ಪರ್ಧೆ ವಿಕಾಸ್ -2017 ಸ್ಪರ್ಧೆ ನಡೆಯಿತುBTL

ದ.ಕ ಜಿಲ್ಲೆಯ 24 ವಿವಿಧ ಪ.ಪೂ. ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸ್ಪರ್ಧೆ ವಿಕಾಸ್ -2017ರಲ್ಲಿ ಭಾಗವಹಿಸಿದವು. ಆಶುಭಾಷಣ ಸ್ಪರ್ಧೆ-ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಶೆಣೈ ಪ್ರಥಮ ಮತ್ತು ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ದ್ವಿತೀಯ ಬಹುಮಾನ ಪಡೆದರು. ಕನ್ನಡ ಭಾಷಣ ಸ್ಪರ್ಧೆ-ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಜಿತೀನ್ ಜೀಜೋ ಪ್ರಥಮ ಮತ್ತು ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿ ಶಾಶಂಕ್ ದ್ವಿತೀಯ ಸ್ಥಾನ ಗಳಿಸಿದರು. ಇಂಗ್ಲಿಷ್ ಭಾಷಣ ಸ್ಪರ್ಧೆ- ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಪ್ರಥಮ ಮತ್ತು ಮಂಗಳೂರು ಸೈಂಟ್ ಆಗ್ನೇಸ್ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಮಿಝನಾ ಅಲಿಮಾ ದ್ವಿತೀಯ ಬಹುಮಾನ ಪಡೆದರು. ಜಾನಪದ ಗೀತೆಗಾಯನ ಸ್ಪರ್ಧೆ-ಮಂಗಳೂರು ಸೈಂಟ್ ಅಲೋಶಿಯಸ್ ಪ.ಪೂ ಕಾಲೇಜಿನ ವಿದ್ಯಾರ್ಥಿ ವಿಜೇತ್ ಉಳ್ಳಾಲ್ ಪ್ರಥಮ ಮತ್ತು ಕಲ್ಲಡ್ಕ ಶ್ರೀ ರಾಮ ಪ. ಪೂ. ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿ ದ್ವಿತೀಯ ಸ್ಥಾನ ಗಳಿಸಿದರು. ಕೊಲಾಜ್ ಸ್ಪರ್ಧೆ- ಕಲ್ಲಡ್ಕ ಶ್ರೀ ರಾಮ ಪ. ಪೂ. ಕಾಲೇಜಿನ ವಿದ್ಯಾರ್ಥಿ ಹರಿಚರಣ್ ಪ್ರಥಮ ಮತ್ತು ಮಂಗಳೂರು ಮಿಲಾಗ್ರೀಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಮೆಲ್ರಿಕ್ ದ್ವಿತೀಯ ಬಹುಮಾನ ಪಡೆದರು. ರಸಪ್ರಶ್ನೆ ಸ್ಪರ್ಧೆ-ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜು ಪ್ರಥಮ ಮತ್ತು ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜು ದ್ವಿತೀಯ ಬಹುಮಾನ ಪಡೆದರು. ಕಿರುಪ್ರಹಸನ ಸ್ಪರ್ಧೆ ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜು ಪ್ರಥಮ ಮತ್ತು ದೇರಳಕಟ್ಟೆ ಕಣಚೂರು ಪ.ಪೂ. ಕಾಲೇಜು ದ್ವಿತೀಯ ಸ್ಥಾನ ಗಳಿಸಿದರು.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ. ಕಾಲೇಜಿನ ತಂಡ ಸಮಗ್ರ ಪಾರಿತೋಷಕ ಪ್ರಶಸ್ತಿ ಪಡೆದುಕೊಂಡಿತು.

By Suddi9

Leave a Reply

Your email address will not be published. Required fields are marked *