ಸುದ್ದಿ9ಮಂಗಳೂರು: ಮೂವರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ ಘಟನೆ ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ಮಹಮ್ಮದ್ ನೌಶಾದ್(28) ಮೊಹಮ್ಮದ್ ಫೈಸಲ್(22), ಮಝೀದ್(28) ಎಂದು ಗುರುತಿಸಲಾಗಿದೆ.
ಕಳವು ಮಾಡಿದ ಬೈಕ್ನೊಂದಿಗೆ ಬಂಟ್ಸ್ ಹಾಸ್ಟೆಲ್ ಬಳಿ ಅಡ್ಡಾಡುತ್ತಿದ್ದ ಸಂದರ್ಭದಲ್ಲಿ ಶಂಕೆಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ತಾವು ಬೈಕ್ಗಳನ್ನು ಕದ್ದಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಆ.4ರಂದು ಬಂಟ್ಸ್ ಹಾಸ್ಟೆಲ್ ಬಳಿ ಬೈಕ್ ಕದಿಯಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ. ಹೊನ್ನಾವರ, ಪಾಂಡೇಶ್ವರ, ಉಳ್ಳಾಲ ಮತ್ತು ಬಂಟ್ವಾಳದಲ್ಲಿ ಬೈಕ್ ಕಳವು ಮಾಡಿದ್ದಾರೆ. ಆರೋಪಿಗಳಲ್ಲಿ ಮಝೀದ್ ಗುಜರಿ ವ್ಯಾಪಾರಿಯಾಗಿದ್ದಾನೆ. ಕದ್ದ ಬೈಕ್ಗಳನ್ನು ಈತನಿಗೆ ಮಾರಾಟ ಮಾಡುತ್ತಿದ್ದರು.

01

By suddi9

Leave a Reply

Your email address will not be published. Required fields are marked *