ಉಡುಪಿ:- ಮಕ್ಕಳನ್ನು ಸಂಸ್ಕತಿಯ ಹರಿಕಾರರನ್ನಾಗಿ ಮಾಡಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿ ಎಂದು ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.
ಶ್ರೀ.ಕ್ಷೇ.ಧ ಗ್ರಾ ಯೋಜನೆ ಉಡುಪಿ ಕಾಪು ವಲಯ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾಪು ಮಹಾ ದೇವಿ ಪ್ರೌಢ ಶಾಲೆಯಲ್ಲಿ ಸೆ.10 ಆದಿತ್ಯವಾರ ನಡೆದ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ಕೃಷ್ಣ ಅಷ್ಟಮಿಯನ್ನು ಕೇವಲ ಆಚರಣೆ ಮಾಡಿದರೆ ಸಾಲದು ಕೃಷ್ಣನ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿದರೆ ಮಾತ್ರ ನಮ್ಮ ಜೇವನ ಯಶಸ್ವಿಯಾಗಲು ಸಾದ್ಯ ಎಂದರು.BeautyPlus_20170910145535_save
ಕಾರ್ಯಕ್ರಮವನ್ನು ಯೋಜನಾಧಿಕಾರಿ ಮಾಲತಿ ದಿನೇಶ್ ಉದ್ಘಾಟಿಸಿ ಮಾತನಾಡಿದರು..ವೇದಿಕೆಯಲ್ಲಿಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಪ್ರದೀಪ್,ಮೇಲ್ವಿಚಾರಕಿ ಜ್ಯೋತಿ ಕುಲಾಲ್, ರಮೇಶ್ ಮುಂತಾದವರಿದ್ದರು.ಅದ್ಯಕ್ಷತೆಯನ್ನು ಒಕ್ಕೂಟದ ಅದ್ಯಕ್ಷ ರವಿ ಮೆಂಡನ್ ವಹಿಸಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ದೆ ಮತ್ತು ಸಾರ್ವಜನಿಕರಿಗೆ ವಿವಿಧ ಕಾರ್ಯಕ್ರಮ ನಡೆಯಿತು.ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಸೇವಾ ಪ್ರತಿನಿಧಿ ಸುಮನ ವಂದಿಸಿದರು.

By suddi9

Leave a Reply

Your email address will not be published. Required fields are marked *