ಗ್ರಾಮಗಳಲ್ಲಿ ಸರ್ವಾನುಮತದ ನಿರ್ಣಯ
ಮಂಗಳೂರು : ಗುರುಪುರ, ಕಂದಾವರ, ಗಂಜಿಮಠ, ಉಳಾಯಿಬೆಟ್ಟು, ನೀರುಮಾರ್ಗ, ಅಡ್ಯಾರು ಮತ್ತು ಮಲ್ಲೂರು ಗ್ರಾಮಗಳು ಸೇರಿರುವ ಗುರುಪುರ ಹೋಬಳಿಯನ್ನು ಹೊಸದಾಗಿ ರಚನೆಗೊಳ್ಳಲಿರುವ ಮೂಡಬಿದ್ರೆ ತಾಲೂಕಿಗೆ ಸೇರಿಸುವ ಪ್ರಸ್ತಾವ ಮರುಪರಿಶೀಲನೆ ನಡೆಸುವುದಾಗಿ ಸೀಎಂ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಭರವಸೆ ನೀಡಿದ್ದಾರೆಂದು ಉತ್ತರ ಮಂಗಳೂರು ಕಾಂಗ್ರೆಸ್ ಶಾಸಕ ಮೊೈದ್ದಿನ್ ಬಾವ ತಿಳಿಸಿದರು.
ಹಿಂದಿನ ಪ್ರಸ್ತಾವದಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಸೇರಿಕೊಂಡಿದ್ದವು. ಜನಪ್ರತಿನಿಧಿಗಳ ಗಮನಕ್ಕೆ ತರದೆಯೇ ಅಧಿಕಾರಿಗಳು ಏಕಪಕ್ಷೀಯ ಹೊಸ ಪ್ರಸ್ತಾವ ಸಲ್ಲಿಸಿದ್ದು, ಅದರಲ್ಲಿ ಬೆಳ್ತಂಗಡಿ ಬದಲಿಗೆ ಗುರುಪುರ ಹೋಬಳಿಯ ಕೆಲವು ಗ್ರಾಮ ಸೇರಿಸಿದ್ದಾರೆ. ಇದನ್ನು ಪಕ್ಷ ಕಟುವಾಗಿ ವಿರೋಧಿಸುತ್ತದೆ ಎಂದಿರುವ ಬಾವ, ಈ ವಿಷಯದಲ್ಲಿ ಉನ್ನತ ಅಧಿಕಾರಿಗಳು ಮತ್ತು ಸೀಎಂ ಸಿದ್ದರಾಮಯ್ಯರ ಜೊತೆ ಚರ್ಚಿಸಿದ್ದೇನೆ ಎಂದರು.

bava
ಗ್ರಾ ಪಂಗಳಲ್ಲಿ ನಿರ್ಣಯ ಜಾರಿ
ಮೂಡಬಿದ್ರಿ ತಾಲೂಕಿಗೆ ಗುರುಪುರ ಹೋಬಳಿ ಸೇರಿಸಬಾರದೆಂದು ಆಗ್ರಹಿಸಿರುವ ಸಂಬಂಧಿತ ಗ್ರಾಮ ಪಂಚಾಯತುಗಳು, ನಿನ್ನೆ ತುರ್ತು ಸಭೆ ಕರೆದು ಸರ್ವಾನುಮತದ ನಿರ್ಣಯ ಕೈಗೊಂಡಿವೆ. `ಗುರುಪುರ ಹಾಗೂ ಈ ಹೋಬಳಿಯ ಇತರ ಗ್ರಾಮಗಳು ಮಂಗಳೂರು ತಾಲೂಕಿನ ವ್ಯಾಪ್ತಿಯಲ್ಲೇ ಮುಂದುವರಿಯಲಿದೆ’ ಎಂಬುದು ನಿರ್ಣಯವಾಗಿದೆ.
ಮೂಡಬಿದ್ರೆ ತಾಲೂಕಿಗೆ ಎಡಪದವು ಪ್ರದೇಶ ಸೇರ್ಪಡೆಗೊಳಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಗುರುಪುರ ಹಾಗೂ ಈ ಹೋಬಳಿಗೆ ಸೇರಿರುವ ದೂರದ ಇತರ ಗ್ರಾಮಗಳ ಸೇರ್ಪಡೆಗೆ ಸಂಬಂಧಿತ ಗ್ರಾಮಗಳಲ್ಲಿ ನಾಗರಿಕರಿಂದಲೂ ಪಕ್ಷಾತೀತ ವಿರೋಧ ವ್ಯಕ್ತವಾಗಿದೆ ಎಂದು ಜಿ ಪಂ(ಗುರುಪುರ) ಸದಸ್ಯ ಯು ಪಿ ಇಬ್ರಾಹಿಂ, ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಹೇಳಿದರು.
ಮಂಗಳೂರು ನಗರ ಪಾಲಿಕೆಯ ಪ್ರಸಕ್ತ ವ್ಯಾಪ್ತಿಗಿಂತ(ಗುರುಪುರ ಸೇತುವೆಯ ಮತ್ತೊಂದು ಅಂಚಿನವರೆಗೆ) ಕೇವಲ ಅರ್ಧ ಫರ್ಲಾಂಗು ಹೊರಗಿರುವ ಗುರುಪುರ ಗ್ರಾಮ ಹಾಗೂ ಮೂಡಬಿದ್ರಿಗೆ ಇನ್ನೂ ದೂರದ ಕೆಲವು ಗ್ರಾಮಗಳನ್ನು ದೂರದ ಮೂಡಬಿದ್ರಿಗೆ ಸೇರಿಸುವುದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದವರು ಹೇಳಿದರು

By Suddi9

Leave a Reply

Your email address will not be published. Required fields are marked *