ಬಂಟ್ವಾಳ : ಶಂಭೂರು ಗ್ರಾಮದ ಯುವ ಸಂಗಮ ಸೇವಾ ಟ್ರಸ್ಟ್ .ರಿ ಶೇಡಿಗುರಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ : 10.09.2017ರಂದು ಆದಿತ್ಯವಾರ ಯುವ ಸಂಗಮದ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಶ್ರೀ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಇವರು ಮಾತನಾಡಿ 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಹಕರಿಸಿದ ಶ್ರೀ ದುರ್ಗಾ ಪರಮೇಶ್ವರಿ ಮಹಿಳಾ ಮಂಡಳಿಯ ಎಲ್ಲಾ ಸದಸ್ಯರನ್ನು ಹಾಗೂ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಗಣೇಶೋತ್ಸವ ಸಮಿತಿಯ ಯುವ ಸದಸ್ಯರನ್ನು ಅಭಿನಂದಿಸಿದರು. 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ವಜೃಂಭನೆಯಿಂದ ನೆರವೇರಿಸುವಂತೆ ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಹೇಳಿದರು ಮತ್ತು ಈ ಪ್ರಯುಕ್ತ ಬೆಳ್ಳಿ ಹಬ್ಬ ಆಚರಿಸುವ ಅಂಗವಾಗಿ ಸ್ವರ್ಣ ಕಿರೀಟ ಧಾರಣೆ ರಚಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಖಜಾಂಚಿ ಹರೀಶ್ ಸುವರ್ಣ ಶೇಡಿಗುರಿ 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಲೆಕ್ಕ ಪತ್ರವನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ 25 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಕೇಶವ ಅಂಚನ್ ಪದವು, ಕಾರ್ಯಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಗಧೀಶ ರೆಂಜಮಾರ್, ಕಾರ್ಯದರ್ಶಿಗಳಾಗಿ ಸುಧೀರ್ ನಿರ್ಮಾಲ್, ಗಣೇಶ್ ಭೀಮಗದ್ದೆ, ಖಜಾಂಚಿಗಳಾಗಿ ಹರೀಶ್ ಸುವರ್ಣ ಶೇಡಿಗುರಿ, ಗೋಪಾಲಕೃಷ್ಣ ಏಲಬ್ಬೆ, ಸಂಚಾಲಕರಾಗಿ ಯಶೋಧರ ಬಂಗೇರ ಕೊಲ್ಲೂರು, ಪದ್ಮನಾಭ ರೆಂಜಮಾರ್, ನಾಗೇಶ್ ಪೂಜಾರಿ ಏಲಬ್ಬೆ ಇವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕ ಯಶೋಧರ ಬಂಗೇರ ಕೊಲ್ಲೂರು ಸ್ವಾಗತಿಸಿ ಕೇಶವ ನಾೈಕ್ ಧನ್ಯವಾದ ನೀಡಿದರು.
