ಫರಂಗಿಪೇಟೆ : ಭಾರತ ಕೊಬ್ಬ ರಾಷ್ಟ್ರ ಭಕ್ತ , ಯೋಗ್ಯ ವ್ಯಕ್ತಿ ಯನ್ನು ನಿರ್ಮಾಣ ವಲ್ಲಿ ಪ್ರಾಥಮಿಕ ಶಿಕ್ಷಣ ಅಡಿಪಾಯವಾಗಬೇಕು ಆ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯವಾಗಬೇಕು . ಸ್ವಾತಂತ್ರ್ಯ ಪೂರ್ವ ದಲ್ಲಿ ಶೇಖಡ 11 ರಷ್ಟಿದ್ದ ಸಾಕ್ಷರತೆ ಈಗ 78 % ರಷ್ಟು ಉನ್ನತಿ ಹೊಂದಿದ್ದರೂ ಕೂಡ ದೇಶದಲ್ಲಿ ಕ್ರಿಮಿನಲ್ ಚಟುವಟಿಕೆ , ದೇಶ ದ್ರೋಹದ ಚಟುವಟಿಕೆ ಗಳು ಹೆಚ್ಚಾಗಿದೆ . ಇದರಿಂದಾಗಿ ಯಾವ ರೀತಿಯ ಶಿಕ್ಷಣ ಮಕ್ಕಳಿಗೆ ನೀಡಲಾಗುತ್ತಿದೆ ಎನ್ನುವುದು  ತಿಳಿಯುತ್ತಿದೆ . ಕೇವಲ ಯಾಂತ್ರಿಕ ಶಿಕ್ಷಣ ದಿಂದ ಮಕ್ಕಳಲ್ಲಿ ಈ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ , ತಳ  ಮಟ್ಟದಲ್ಲೇ  ಶಿಕ್ಷಣವನ್ನು ಕುಲಗೆಡಿಸಿದ್ದೇವೆ ಎಂಬುದು ಖೇದಕರ ಸಂಗತಿ  ಎಂದು ಮಾಜಿ ಸಚಿವರು , ವಿಧಾನ ಪರಿಷತ್ ಸದಸ್ಯ ರಾದ ಕೋಟ ಶ್ರೀನಿವಾಸ ಪೂಜಾರಿ ಯವರು ನವೋದಯ ಮಿತ್ರ ಕಲಾ ವೃಂದ ಇದರ ದತ್ತು ಯೋಜನೆಯಡಿ ದ  ಕ  ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ  ಇಲ್ಲಿಗೆ ದಾನಿಗಳ ನೆರವಿನೊಂದಿಗೆ ನಿರ್ಮಿಸಿಕೊಟ್ಟ ಮುಂಡಾಜೆ ಗುತ್ತು ವಿಠ್ಠಲ ಶೆಟ್ಟಿ ಸಭಾ ಭವನ ವನ್ನು ಉದ್ಘಾಟಿಸಿ ಮಾತನಾಡಿದರು .IMG_7522

11 vp 2

11 vp 3

ನವೋದಯ ಮಿತ್ರ ಕಲಾ ವೃಂದದ ಸಂಚಾಲಕರಾದ  ದಾಮೋದರ ನೆತ್ತರಕೆರೆ ಯವರು ಮಾತನಾಡಿ ಹೊಯಿಗೆ  ಗದ್ದೆ ಅನಂತ ಹೊಳ್ಳರು ದಾನ ನೀಡಿದ ಈ ಸ್ಥಳದಲ್ಲಿ ನಿರ್ಮಾಣ ವಾದ ಈ ಶಾಲೆ ಗೆ  105 ವರ್ಷಗಳ ಇತಿಹಾಸ ಇದೆ , ಮಾಜಿ ಆಹಾರ ಸಚಿವರಾದ ನಾಗಪ್ಪ ಆಳ್ವ ರಂತಹ ಮಹನೀಯರು ಓದಿದ  ಈ ಶಾಲೆ . ಇತ್ತೀಚಿಗೆ ಹಾಜರಾತಿಯಲ್ಲಿ ಗಣನೀಯ ಕುಸಿತ ವಾದಾಗ ನವೋದಯ ಮಿತ್ರ ಕಲಾ ವೃಂದ ಶಾಲೆಯನ್ನು ದತ್ತು ಪಡೆದು ಮಕ್ಕಳ ಸಂಖ್ಯೆಯನ್ನು ಹೆಚ್ಚು ಮಾಡಿ ಶಿಕ್ಷಕರ ಕೊರತೆ ನೀಗಿಸುವಲ್ಲಿ 4 ಗೌರವ ಶಿಕ್ಷಕರನ್ನು ನೇಮಿಸಿ ಅವರ ಸಂಭಾವನೆ ಯನ್ನು ಭರಿಸಿದ್ದೇವೆ . ಅಲ್ಲದೆ ಶಾಲೆಗೆ ಸ್ಥಳದ ಅಭಾವ ವಿದ್ದಾಗ ದಾನಿಗಳ ನೆರವಿನಿಂದ  ಸಭಾ ಭವನ ನಿರ್ಮಿಸುವಲ್ಲಿ ಯಶಸ್ವಿ ಯಾಗಿದ್ದೇವೆ  . ಇನ್ನಷ್ಟು ನೆರವನ್ನು ನೀಡುವ ಭರವಸೆಯನ್ನು ನೀಡಿದರು , ವೇದಿಕೆಯಲ್ಲಿ ದಾನಿಗಳಾದ  ವಸಂತಿ ವಿ ಶೆಟ್ಟಿ ( ಮುಂಡಾಜೆ ಗುತ್ತು ದಿ .  ವಿಠಲ ಶೆಟ್ಟಿ ಯವರ ಧರ್ಮಪತ್ನಿ ) ಮತ್ತು ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು .

12 vp sanmana

 ಕೋಟ ಶ್ರೀನಿವಾಸ್ ಪೂಜಾರಿಯವರು ತಮ್ಮ ಅನುದಾನ ದಿಂದ 2 ಲಕ್ಷ ರೂಪಾಯಿಗಳ ಘೋಷಣೆ ಮಾಡಿದರು ಅಲ್ಲದೆ   ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ರವರು ತಮ್ಮ ಅನುದಾನದಿಂದ 1 ಲಕ್ಷ ರೂಪಾಯಿಗಳ ಘೋಷಣೆ ಯನ್ನು ಮಾಡಿದರು    ಸಮಾರಂಭ ದ ಅಧ್ಯಕ್ಷತೆ ಯನ್ನು ದ ಕ  ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಮೀನಾಕ್ಷಿ ಶಾಂತಿಗೋಡು ವಹಿಸಿ ಕೊಂಡಿದ್ದರು , ಮುಖ್ಯ ಅತಿಥಿ ಗಳಾಗಿ ಸಭಾ ಭವನದದಾನಿ ಗಳಾದ ಮುಂಡಾಜೆ ಗುತ್ತು ಚಿಕ್ಕರಾಜೇಂದ್ರ ಶೆಟ್ಟಿ , ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ , ಕಳ್ಳಿಗೆ ಗ್ರಾಮ ಪಂಚಾಯತ್  ಅಧ್ಯಕ್ಷೆ   ರತ್ನ , ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿ  ಶ್ರೀಕಾಂತ್ , ಖ್ಯಾತ ವಕೀಲರಾದ  ಅಶ್ವಿನಿ ರೈ ಬಿ ಸಿ ರೋಡ್ , ನವೋದಯ ಮಿತ್ರ ಕಲಾ ವೃಂದ ದ ಗೌರವಾಧ್ಯಕ್ಷರಾದ ಸುಬ್ರಮಣ್ಯ ರಾವ್ , ಅಧ್ಯಕ್ಷರಾದ  ಬಿ ಸುರೇಶ ಭಂಡಾರಿ ಅರ್ಭಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ ಎನ್  , ಶಾಲಾ ಮುಖ್ಯೋಪಾಧ್ಯಾರಾದ  ಗುಣರತ್ನ  ಮತ್ತಿತರರು ಉಪಸ್ಥಿತರಿದ್ದರು ,  ನವೋದಯ ಮಿತ್ರ ಕಲಾ ವೃಂದ ಅಧ್ಯಕ್ಷ ರಾದ  ಬಿ ಸುರೇಶ ಭಂಡಾರಿ ಅರ್ಭಿ  ಸ್ವಾಗತಿಸಿದರು

By Suddi9

Leave a Reply

Your email address will not be published. Required fields are marked *