ಸುದ್ದಿ9 ಕೈಕಂಬ: ಪೊಳಲಿ ಒಂದು ಆಧ್ಯಾತ್ಮ ದೇಗುಲ. ಒಂದು ಕಾಲದಲ್ಲಿ ಸಂಸ್ಕೃತ ವಿದ್ವಾಂಸರ ಲೋಕವಾಗಿದ್ದ ಪುಲಿನಾಪುರ ಕಳೆದ ಎರಡು ದಿನಗಳಿಂದ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಿಂದಾಗಿ ಪುಲಿನಾಪುರದ ಗತವೈಭವವನ್ನು ಸಾರಿತು.
ಆಧ್ಯಾತ್ಮ ಲೋಕದ ಮೇರು ವ್ಯಕ್ತಿಗಳನ್ನು ಹಿಡಿದು ಸಾರಸ್ವತ ಲೋಕದ ದಿಗ್ಗಜರು ಎರಡು ದಿನಗಳ ಕಾಲ ಪೊಳಲಿಯ ದೇವಿ ಸನ್ನಿಧಾನಕ್ಕೆ ಕಾಲಿಟ್ಟು ಪಾವನರಾದರು. ರಜೋಗುಣ ತಮೋಗುಣ ಆವರಿಸಿ ಬಳಲಿಕೆಯಿಂದ ಬೆಂಡಾಗಿದ್ದ ಜನರು ಶ್ರೀದೇವಿಯ ಸಾತ್ವಿಕ ಲಹರಿಗಳು ಮನುಷ್ಯನ ಜಡತ್ವವನ್ನು ನಿವಾರಿಸಿ ಹೊಸ ಚೈತನ್ಯಕ್ಕೆ ನಾಂದಿಹಾಡಿತು.ಕಾಟಾಚಾರಕ್ಕೆಂಬಂತೆ ಆರಂಭವಾಗಿದ್ದ, ಯಾವುದೂ ಒಂದು ಸಿದ್ಧತೆ ಇಲ್ಲದೆ ಗೊಂದಲದ ಗೂಡಾಗಿದ್ದ, `ಆಯೋಜಕರು ಏನು ಮಾಡುತ್ತಾರೋ ಏನೋ?’ಎಂಬ ಚಿಂತೆಗೆ ಕಾರಣವಾಗಿದ್ದ ಅಲ್ಲದೆ ಆಷಾಢ ಮಾಸದ ಭೋರ್ಘರೆವ ಮಳೆಯ ನಡುವೆ ಸಮ್ಮೇಳ ನಡೆಯುವುದೇ ಎಂಬ ಪ್ರಶ್ನೆಗಳು ಸ್ವತಃ ಸಮ್ಮೇಳನ ವಹಿಸಿಕೊಂಡವರನ್ನೇ ಕಾಡಿತ್ತು. ಆದರೆ ಪೊಳಲಿಯ ದೇವಿಯ ಅನುಗ್ರಹದಿಂದಾಗಿ ನಿರೀಕ್ಷಿಸಿದಕ್ಕಿಂತಲೂ ಹತ್ತುಪಟ್ಟು ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿರುವುದು ಎಲ್ಲರನ್ನೂ ನಿಬ್ಬೆರಗು ಮಾಡಿತು.

24 SURES SHTTY

1B

2B

3B

4 B

5B

6 SANG

7 Y

8 PO

8 SAVADA

9 RAGU

10 Y MAHILE

11--CITHRA

12 AVI

13 RAJASRI MAHILEYARU

14 V

17 V

18 SANMANA

18V

19 JADU

20 SA

21 VPI

22

23

24

 

ನಾಡೋಜ ಕೆಪಿ ರಾವ್ ಬಹಳಷ್ಟು ಬಂದಿಗೆ ಕೈಕಂಬ ಸಮೀಪದ ಕಿನ್ನಿಕಂಬಳದವರೆಂಬುದೇ ಗೊತ್ತಿರಲಿಲ್ಲ. ತನ್ನ ಸ್ವಂತಿಕೆಯಿಂದ ಅಕ್ಷರಭ್ಯಾಸ ಮಾಡಿಕೊಂಡು ಕಂಪ್ಯೂಟರ್ ವಿಜ್ಞಾನಿಯಾಗಿ, ತಂತ್ರಾಂಶ(ಸಾಫ್ಟ್ ವೇರ್) ಭಾಷಾ ತಜ್ಷ ಗಣಕ ಮಹೋಪಾಧ್ಯಾಯರಾದ, ಕನ್ನಡ ಮುದ್ರಣ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದ ಡಾ. ಕಿನ್ನಿಕಂಬಳ ಪದ್ಮನಾಭ ರಾವ್ ಸಮ್ಮೇಳನಾಧ್ಯಕ್ಷರಾಗಿರುವುದು ಅನೇಕ ಮಂದಿ ಸಾಹಿತ್ಯ ಪ್ರೇಮಿಗಳನ್ನು ಸಂತುಷ್ಟರನ್ನಾಗಿಸಿತು. ಹೆಚ್ಚಿನವರು ಕೆ.ಪಿ ರಾವೇನು ಹೇಳುತ್ತಾರೆ ಎಂಬುದು ಕಾದು ಕುಳಿತಿದ್ದರು. ಕನ್ನಡಕ್ಕೆ ಯೂನಿಕೋಡ್ ತಂತ್ರಾಂಶವನ್ನು ತರುವ ಬಗ್ಗೆ ಮಾತಾಡಿದ್ದು ಇನ್ನಷ್ಟು ಭರವಸೆ ಮೂಡಿಸಿದೆ.
ಬ್ರಾಹ್ಮಣರ ಕೂಟ ಎಂಬ ಅಪವಾದ ಕೇಳಿಬಂದಿತ್ತು:
ಪೊಳಲಿಯ ಸಾಹಿತಯ ಸಮ್ಮೇಳನಕ್ಕೆ ಹೆಚ್ಚಿನ ಎಡಪಂಥೀಯ ಧೋರಣೆಯುಳ್ಳ ಸಾಹಿತಿಗಳು ಆಗಮಿಸಿರಲಿಲ್ಲ. ಇದೊಂದು ಬ್ರಾಹ್ಮಣರ ಕೂಟ ಎಂದು ಜರೆದಿದ್ದರು. ಸಾಹಿತ್ಯ ಸಮ್ಮೇಳನದಲ್ಲಿ ಮೀನು, ದನದ ಮಂಸ ಬೇಕೆನ್ನುವವ ತಾಮಸ ಬುದ್ಧಿಯ ಸಾಹಿತಿಗಳಿಗೆ ಪೊಳಲಿಯ ಸಾತ್ವಿಕ ಲೋಕವನ್ನು ತೆರೆದಿಡುವ ಸಮ್ಮೇಳನ ಬ್ರಾಹ್ಮಣರ ಕೂಟ ಎಂಬಂತೆ ಕಂಡುಬಂದಿರುವುದರಲ್ಲಿ ಅಚ್ಚರಿಯಿಲ್ಲ.
ಒಟ್ಟಿನಲ್ಲಿ ಎರಡು ದಿನಗಳಲ್ಲಿ ಮೂಡಿಬಂದ ಕಾರ್ಯಕ್ರಮ ಅತ್ಯಂತ ಕಡಿಮೆ ಅವಧಿಯಲ್ಲಿ ಏನು ಬೇಕೋ ಅದನ್ನು ಮಾಡಿಸಿಕೊಟ್ಟಿತು. ರಾಜ್ಯ ಸಮ್ಮೇಳನದಲ್ಲಿ ಆಗಲಾರದ ನಿರ್ಣಯಗಳನ್ನು ತೆಗೆದುಕೊಂಡಿರುವುದು ಕಾರ್ಯಕ್ರಮದ ಹೆಗ್ಗಳಿಕೆ. ಕನ್ನಡ ಹಾಗೂ ಸಹಿತ್ಯ ಮನನಸ್ಸು ಎಂಬ ಬಗ್ಗೆ ಅನೇಕ ಸಮ್ಮೆಳನಗಳು ಮೂಡಿಬಂದಿತ್ತು. ಆದರೆ ಗಣಕ ವಿಜ್ಞಾನದ ಇತಿಮಿತಿಗಳನ್ನು ಕಂಡುಕೊಂಡು ಕನ್ನಡವನ್ನು ಕಂಪ್ಯೂಟರೀಕರಣ ಮಾಡಬೇಎಂಬ ಒತ್ತಾಸೆ ಕೇಳಿಬಂದಿರುವುದು ಕನ್ನಡ ಇನ್ನಷ್ಟು ಕನ್ನಡ ಇನ್ನಷ್ಟು ಆಧುನೀಕರಣಕ್ಕೆ ತೆರೆಯಿತೆಂಬ ಒತ್ತಾಸೆ ಕೇಳಿಬಂದಿರುವುದು ಭರವಸೆಯ ಬೆಳಕನ್ನು ಮೂಡಿಸಿದೆ.
ಕಾರ್ಯಕ್ರಮದುದಕ್ಕೂ ಪೊಳಲಿಯ ಇತಿಹಾಸ, ಮಹತ್ವ, ಜನಪದ, ಹಾಗೂ ಶಾಸ್ತ್ರೀಯ ಕಾರ್ಯಕ್ರಮಗಳು ತುಳುನಾಡಲ್ಲಿ ಕನ್ನಡದ ಕಂಪನ್ನು ಪಸರಿಸಿತು.

 

By suddi9

Leave a Reply

Your email address will not be published. Required fields are marked *