ಬಂಟ್ವಾಳ : ಸಜಿಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಕಂದೂರಿನಿಂದ ಮಡಿವಾಳಪಡ್ಪು ವರೆಗೆ 8ಲಕ್ಷ ವೆಚ್ಚದ ಡಾಮರೀಕರಣ ಕಾಮಗಾರಿಗೆ ಅರಣ್ಯ ಪರಿಸರ ಜೀವಿಶಾಸ್ರ್ತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. . ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕ ಪರಮೇಶ್ವರ ಮೂಲ್ಯ, ಆರಾದನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ತಾ.ಪಂ.ಸದಸ್ಯೆ ನಸೀಮಾ ಬೇಗಂ, ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಪ್ರಮುಖರಾದ ಹರೀಶ್ ಗಟ್ಟಿ, ದಾಮೋದರ್, ಅಣ್ಣಪ್ಪಯ್ಯ, ರುಕ್ಮಯ, ಚಂದ್ರಶೇಖರ ರಾವ್, ಮುರಳೀಧರ ರಾವ್, ಬಾಲಕೃಷ್ಣ ಮಡಿವಾಳಪಡ್ಪು, ರಮಾನಂದ ನಾಯಕ್, ಚಂದ್ರಶೇಖರ ಆಚಾರ್, ಕೃಷ್ಣಪ್ಪ ಮಡಿವಾಳಪಡ್ಪು , ಭೋಜ ಕುಲಾಲ್ , ಐತಪ್ಪ ಉಪಸ್ಥಿತರಿದ್ದರು.
