ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕೊಕ್ಕೊ ಪಂದ್ಯಾಟದಲ್ಲಿ ನೈನಾಡು ಸರ್ಕಾರಿ ಪ್ರೌಢಶಾಲೆ ಇದರ ಬಾಲಕರ ತಂಡ ಪ್ರಥಮ ಸ್ಥಾನ ಗೆಲ್ಲುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಉಳಿದಂತೆ ಇಲ್ಲಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. 
ದೈಹಿಕ ಶಿಕ್ಷಕಿ ಸುಕನ್ಯಾ ರತ್ನ, ಸಹಶಿಕ್ಷಕಿ ರಮಾ ಮೋಹನ್, ಪ್ರಾಧ್ಯಾಪಕರಾದ ಪ್ರಕಾಶ ನಾಯ್ಕ್, ಹೇಮಣ್ಣ ನಿಂಬಣ್ಣನವರ್ ಮತ್ತಿತರರು ಟ್ರೋಫಿ ಸ್ವೀಕರಿಸಿದರು. ಇದೇ ಸೆ.9ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಈ ತಂಡ ಅರ್ಹತೆ ಪಡೆದುಕೊಂಡಿದೆ
