ಬಂಟ್ವಾಳ: ಬಾಲವಿಕಾಸ ಸಮಿತಿ ಹಾಗೂ ಶ್ರೀ ದುರ್ಗಾ, ಶ್ರೀ ಶಾರದ ಸ್ತ್ರೀ ಶಕ್ತಿ ಸಂಘಗಳು ಮತ್ತು  ಪೊಷಕರ ಸಂಯುಕ್ತ ಆಶ್ರಯದಲ್ಲಿ ಮಧ್ವ ಕಾವಳಪಡೂರು ಅಂಗನವಾಡಿ ಕೇಂದ್ರದಲ್ಲಿ 23 ವರ್ಷಗಳ ಸಹಾಯಕಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡ ಮೀನಾಕ್ಷಿ ದೇವರಾಜ್ ಆಚಾರ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

BTW_SEP4_1
ಕಾವಳಪಡೂರು ಗ್ರಾ ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶ್ರೀ ಕೃಷ್ಣನನ್ನು ಹೆತ್ತ ತಾಯಿ ದೇವಕಿಯಾಧರೂ ತನ್ನ ಲೀಲೆ, ಬ್ರಹ್ಮಂಡವನ್ನು ತೋರಿಸಿದ್ದು  ಸಾಕು ತಾಯಿ ಯಶೋಧೆಗೆ. ಅದೇ ರೀತಿ ಮಕ್ಕಳ ಹೆತ್ತ ತಾಯಿ ಒಬ್ಬರಾದರೂ ಅಂಗನವಾಡಿ ಕೇಂದ್ರಗಳಲ್ಲಿ ಅವರನ್ನು ತಾಯಿಯಷ್ಟೇ ಪ್ರೀತಿಯಿಂದ ನೋಡಿಕೊಳ್ಳುವವರು ಇಲ್ಲಿನ ಸಹಾಯಕಿಯರು. ಆದ್ದರಿಂದ ತಾಯಿಗಿಂತಲೂ ಹೆಚ್ಚಿನ ಪ್ರೀತಿ ಅಂಗನವಾಡಿಯ ಸಹಾಯಕಿಯರ ಮೇಲೆ ಮಕ್ಕಳಿಗೆ ಇರುತ್ತದೆ. ಅಂತಹ ದೃಶ್ಯ ಅಂಗನವಾಡಿಯಲ್ಲೂ ಕಾಣಬಹುದಾಗಿದೆ ಎಂದರು.

ಬಾಲ ವಿಕಾಸ ಸಮಿತಿ ಅಧ್ಯಕ್ಷ ಆನಂದ ಅಧ್ಯಕ್ಷತೆ ವಹಿಸಿದ್ದರು.ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಕಾವಳಪಡೂರು ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯ ಶಿವಪ್ಪ ಬಂಗೇರ ನಿನ್ನಿಕಲ್ಲು, ಲಕ್ಷ್ಮಿ, ಚಂದ್ರಶೇಖರ ಕರ್ಣ, ಮಧ್ವ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ, ಗೋಪಾಲಕೃಷ್ಣ ಬಂಗೇರ ಚಂದ್ರಹಾಸ ಶೆಟ್ಟಿ ಮದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೂಪ ಸ್ವಾಗತಿಸಿದರು, ನಳಿನಿ ವಂದಿಸಿದರು, ನಾಗೇಶ್ ಮದ್ವ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *