ಕೈಕಂಬ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಹಂತ-4 (ಗಾಂಧಿಪಧ ಗ್ರಾಮಪಥ ) ಅರ್ಜುನಕೋಡಿ ಮುಂಡಬೆಟ್ಟು ಈಶ್ವರಕಟ್ಟೆ ರಸ್ತೆಗೆ ಕಾಕ್ರೀಟು ರಸ್ತೆಗೆ ಕರ್ನಾಟಕ ರಾಜ್ಯ ಸರಕಾರ ಅನುದಾನದಡಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎ ಮೊಹಿಯುದ್ದೀನ್ ಬಾವ 4 ಕೋಟಿ 04 .40 ಲಕ್ಷ ರೂ ಮಂಜೂರು ಗೊಳಿಸಿ ಭಾನುವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಯು.ಪಿ ಇಬ್ರಾಹಿಂ, ಮುಖಂಡರಾದ ಶಿವಶಂಕರ್ ಕೊಟ್ಯಾನ್ , ತಾ.ಪ ಸದಸ್ಯ ಜಿ. ಸುನೀಲ್ ಗಂಜಿಮಠ, ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಮಾಜಿ. ಜಿ. ಪಂ.ಸದಸ್ಯ ಕೃಷ್ಣ ಅಮೀನ್, ಗ್ರಾ.ಪಂ. ಅಧ್ಯಕ್ಷೆ ಶಾಂತ ಎಂ., ಗ್ರಾ.ಪಂ ಉಪಾಧ್ಯಕ್ಷ ನೂರ್‍ಹ್ಯಮದ್, ಗಂಜಿಮಠ.ಗ್ರಾ.ಪಂ. ಉಪಾಧ್ಯಕ್ಷ ಝಾಕೀರ್, ಗಣೇಶ್ ಪೂಜಾರಿ, ಭಾಸ್ಕರ ಮಲ್ಲಿ , ಪದ್ಮನಾಭಪೂಜಾರಿ, ರಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

