ಬಂಟ್ವಾಳ:ಖಾಸಗಿ ವಾಹನಗಳು ಬಾಡಿಗೆ ಮಾಡುವುದು,ರೂಟ್ ಪರ್ಮಿಟ್ ಹೊಂದಿರುವ ಬಸ್ ಗಳು ರೂಟ್ ಬಿಟ್ಟು ಬಾಡಿಗೆ ಮಾಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿರುವಸಂಬಂಧಪಟ್ಟ ಇಲಾಖೆಯ ನಿರ್ಲಕ್ಷತನವನ್ನು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ ಖಂಡಿಸಿದೆ.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಂಘದ 34 ನೇ ವಾರ್ಷಿಕ ಮಹಾಸಭೆಯಲ್ಲಿ ಈ ಖಂಡನಾ ನಿರ್ಣಯಕೈಗೊಳ್ಳಲಾಯಿತು.
ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೂ ಆಯೋಗ್ಯವಾಗಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯನ್ನು ಸುಸ್ಥಿಗೆ ತರುವಂತೆ ಮನವಿ,ಪ್ರತಿಭಟನೆಗೂ ಸ್ಪಂದಿಸದ ಜಿಲ್ಲಾಡಳಿತ,ರಾ.ಹೆ.ಪ್ರಾ.ಇಲಾಖೆಯ ಧೋರಣೆಯನ್ನು ಕೂಡ ಸಭೆ ಖಂಡಿಸಿತು.ಈ ಸರ್ವಿಸ್ ರಸ್ತೆಯಲ್ಲಿ ಅವೈಜಾÐನಿಕವಾಗಿ ಚರಂಡಿ ನಿರ್ಮಿಸಿದ ಬಳಿಕ ರಸ್ತೆ ಮತ್ತಷ್ಟು ಹದಗೆಟ್ಟಿದಲ್ಲದೆ,ಚರಂಡಿ ಕಾಮಗಾರಿಯನ್ನು ಆರ್ಧಕ್ಕೆ ನಿಲ್ಲಿಸಿದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಇಲಾಖೆ ಇನ್ನೂ ಮೌನ ತಾಳಿದರೆ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತೀವ್ರ ಸ್ವರೂಪದ ಹೋರಾಟ ನಡೆಸಲು ಸಭೆ ನಿರ್ಧರಿಸಿತು.
ಸಂಘದ ಸ್ಥಾಪಕಾಧ್ಯಕ್ಷರಾದ ಬಿ.ಎಂ.ಪ್ರಭಾಕರ ದೈವಗುಡ್ಡೆ ಸಬಾಧ್ಯಕ್ಷತೆ ವಹಿಸಿದ್ದರು.ವ್ಯಾನ್ ಚಾಲಕರ ಸಂಘದ ಅಧ್ಯಕ್ಷ ಕ್ರಷ್ಣ ಅಲ್ಲಿಪಾದೆ ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ವಿನ್ಸೆಂಟ್ ರೊಡ್ರಿಗಸ್ ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ರಾಮಕುಲಾಲ್ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ : ಇದೇ ವೇಳೆ 2017-18 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ವಿನ್ಸೆಂಟ್ ರೋಡ್ರಿಗಸ್(ಅಧ್ಯಕ್ಷ),ವಿಠಲ ರೈ ಮಧ್ವಗುತ್ತು(ಉಪಾಧ್ಯಕ್ಷ), ಜೀವನ್ ಕುಪ್ಪಿಲ(ಪ್ರ.ಕಾರ್ಯದರ್ಶಿ),ಲತೀಫ್ ಪರ್ಲಿಯಾ (ಜತೆ ಕಾರ್ಯದರ್ಶಿ), ತಿಮ್ಮಪ್ಪ ಪೂಜಾರಿ ಸಿದ್ದಕಟ್ಟೆ (ಕೋಶಾದಿಕಾರಿ)ಹಾಗೂ 18 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.
