ಬಂಟ್ವಾಳ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಹೊಗೆಮುಕ್ತ ಸಮಾಜ ನಿರ್ಮಿಸುವುದರ ಜೊತೆಗೆ ಕಟ್ಟಿಗೆ ಕೊರತೆ ಮತ್ತು ಅಪಾರ ಪ್ರಮಾಣದ ಹೊಗೆಯಿಂದ ಮಹಿಳೆಯರ ಕಣ್ಣೀರು ಒರೆಸುವುದಕ್ಕಾಗಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಗೆಮುಕ್ತ ಗ್ರಾಮ ನಿರ್ಮಿಸುವ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಉಜ್ವಲ’ ಯೋಜನೆಯಡಿ ಮಂಜೂರಾದ ಮೂರನೇ ಹಂತದ ‘ಉಚಿತ ಅಡುಗೆ ಅನಿಲ ಮತ್ತು ಸ್ಟೌವ್’ ಮತ್ತಿತರ ಉಪಕರಣಗಳನ್ನು ಭಾನುವಾರ ವಿತರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಮತ್ತಿತರರು ಮಾತನಾಡಿದರು.
ಸ್ಥಳೀಯ ಬಿಜೆಪಿ ಮುಖಂಡ ಎ.ವಿಜಯ ರೈ, ಎಂ.ದುರ್ಗಾದಾಸ ಶೆಟ್ಟಿ ಮಾವಂತೂರು, ರಮಾನಾಥ ರಾಯಿ, ಸಂತೊಷ್ ಕುಮಾರ್ ಬೆಟ್ಟು, ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹರೀಶ ಆಚಾರ್ಯ, ಇಂದಿರಾ ಮಧುಕರ ಬಂಗೇರ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ರಾಘವ ಅಮೀನ್, ಕುಸುಮ, ಪದ್ಮನಾಭ ಗೌಡ, ರಂಜನಿ, ವಿತರಕ ಮಂಜುನಾಥ ಪ್ರಭು, ಪ್ರಮುಖರಾದ ಪರಮೇಶ್ವರ ಪೂಜಾರಿ, ಗಂಗಾಧರ ಪಿಲ್ಕಾಜೆ, ಹರೀಶ ಪೂಜಾರಿ, ಸತೀಶ ಬೊಲ್ಪೊಟ್ಟು, ತಿಮ್ಮಪ್ಪ ಪೂಜಾರಿ ಕುದ್ಮಾಣಿ ಮತ್ತಿತರರು ಇದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ ಬಿ.ಅರಳ ಸ್ವಾಗತಿಸಿ, ವಂದಿಸಿದರು.
—
