ಬಂಟ್ವಾಳ : ಬಿ.ಸಿ.ರೋಡಿನ ಸರ್ವಿಸ್ ರಸ್ತೆ ತೇಪೆ ಕಾರ್ಯದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ನಡೆಯಿತು. ಹದಗೆಟ್ಟ ಸರ್ವಿಸ್ ರಸ್ತೆಯ ಗುಂಡಿ ಮುಚ್ಚಲು ಟ್ರಾಫಿಕ್ ಪೊಲೀಸರು ಮುಂದಾದ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು.ಸೋಮವಾರಬೆಳಿಗ್ಗೆ
ಇನ್ನೊಂದೆಡೆ ಧಾರಾಕಾರ ಮಳೆಯು ಸುರಿಯುತ್ತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.ಒಂದು ಭಾಗದಲ್ಲಿ ಪಾಣೆಮಂಗಳೂರಿನವರೆಗೂ ಮತ್ತೊಮನದೆಡೆ ತಲಪಾಡಿಯವರೆಗೂ ವಾಹನಗಳು ಸರತಿಯಲ್ಲಿ ಸಂಚರಿಸಬೇಜಾಯಿತು.ಟ್ರಾಫಿಕ್ ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಟ್ಟರು.
