ಉಡುಪಿ: ಉತ್ತಮ ಸಂಸ್ಕಾರಯುತ ಜೀವನ ನಡೆಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗಲು ಸಾದ್ಯ.ವಿದ್ಯಾರ್ಥಿಗಳು ಉತ್ತಮ ರೀತಿಯ ಹವ್ಯಾಸಗಳನ್ನು ರೂಡಿಸಿಕೊಂಡು ಬಂದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಜೇಸಿ ವಲಯ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.ಅವರು ಆ.23 ರಂದು ಕಲ್ಯಾಣಪುರ ತ್ರಿಷಾ ಕಾಲೇಜಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುರಬ್ಯಾಸಗಳು ಜೀವನವನ್ನು ಹಾಳು ಮಾಡುತ್ತವೆ ಹೀಗಾಗಿ ಉತ್ತಮ ಬದುಕು ನಮ್ಮದಾಗಿಸಲು ನಾವು ಉತ್ತಮ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೀಜಿನ ಅದ್ಯಕ್ಷ ಪ್ರಭಾಕರ ಭಂಡಾರಿ ವಹಿಸಿದ್ದರು.ವೇದಿಕೆಯಲ್ಲಿ ಶ್ರೀ.ಕ್ಷೇ.ಧ ಗ್ರಾ ಯೋಜನೆ ಒಕ್ಕೂಟದ ಅದ್ಯಕ್ಷೆ ಪ್ರೀತಿ ಪ್ರಭಾಕರ,ಮೇಲ್ವಿಚಾರಕ ವಸಂತ್ ದೇವಾಡಿಗ,ಜೇಸಿಐ ಕಲ್ಯಾಣಪುರ ಕೋಸ್ಮೋ ಸಿಟಿಯ ಸಂದ್ಯಾ ದೀಪ್ತಿ ರಿತೇಶ್ ಮುಂತಾದವರಿದ್ದರು.ಸೇವಾ ಪ್ರತಿನಿಧಿ ಸುಮಾ ಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ್ ವಂದಿಸಿದರು.
