ಬಂಟ್ವಾಳ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇವರು ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಕಲಾನಿಕೇತನ ನಾಟ್ಯ ಶಾಲೆ ಬಿ.ಸಿ.ರೋಡ್ ಇಲ್ಲಿನ ವಿದ್ಯಾರ್ಥಿನಿ ಅನನ್ಯಾ.ಜೆ.ಕುಂದರ್ ಶೇಕಡಾ 86 ಅಂಕ ಗಳಿಸಿರುತ್ತಾಳೆ. ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯಾಗಿರುವ ಈಕೆ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಮಂಡಾಡಿ ನಿವಾಸಿ ಹರೀಶ್ ಕುಂದರ್ ಮತ್ತು ಜಯಲಕ್ಷ್ಮಿ ದಂಪತಿ ಪುತ್ರಿ.

