ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇದರ ಸಹಯೋಗದಲ್ಲಿ ಸ್ವಉದ್ಯೋಗ ವಿಚಾರ ಸಂಕಿರಣ ಕಾರ್ಯಕ್ರಮವು ಮಾರಿಪಳ್ಳ ಕುಲಾಲ ಸುಧಾರಕ ಸಂಘ ಸಭಾ ಭವನದಲ್ಲಿ ನಡೆಯಿತು. ಬಂಟ್ವಾಳ ರೋಟರಿ ಕ್ಲಬ್ನ ಚಾರ್ಟರ್ಡ್ ಅಕೌಂಟೆಂಟ್ ರೋ| ಸುರೇಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಉದ್ಯೋಗ ಮಾಹಿತಿ ಸಂಕಿರಣ ಜನರಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ಸಹಕಾರಿಯಾಗಿದೆ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳವಂತೆ ತಿಳಿಸಿದರು. ಪುದುಗ್ರಾಮ ಪಂಚಾಯತ್ ಅಧ್ಯಕ್ಷೆ ಆತಿಕಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯೋಜನೆಯ ಮೂಲಕ ನಡೆಯುವ ಕೃಷಿ, ಸ್ವಉದ್ಯೋಗ ಕಾರ್ಯಕ್ರಮಗಳು ಹಾಗೂ ತಾಲೂಕಿನ ಸಾಧನೆಯ ಬಗ್ಗೆ ತಿಳಿಸಿದರು. ಸ್ವಉದ್ಯೋಗ ಮಾಹಿತಿ ಸಂಕಿರಣ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳವಂತೆ ತಿಳಿಸಿದರು. ಕುಲಾಲ ಸುಧಾರಕ ಸಂಘ ಮಾರಿಪಳ್ಳ ಇದರ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಶುಭ ಹಾರೈಸಿದರು.
ಸ್ವಉದ್ಯೋಗ ಮಾಹಿತಿ ಗೋಷ್ಠಿ: ಉಜಿರೆ ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಉದ್ಯೋಗದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರುಡೆಸೆಟ್ ಸಂಸ್ಥೆಯ ಪರಿಚಯ ಕೃಷಿ, ಕೃಷಿಯೇತರ ಸ್ವಉದ್ಯೋಗದ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. ತುಂಬೆ ವಲಯದ ಪ್ರಗತಿ ಬಂಧು ಒಕ್ಕೂಟದ ವಲಯಾಧ್ಯಕ್ಷ ಜನಾರ್ಧನ ಆಚಾರ್ಯ, ರೋಟರಿಕ್ಲಬ್ ಬಂಟ್ವಾಳ ಇದರ ನಿರ್ದೇಶಕ ರೋ| ಬಿ ಸದಾಶಿವ ಬಾಳಿಗಾ ಉಪಸ್ಥಿತರಿದ್ದರು. ತುಂಬೆ ವಲಯದ ಮೇಲ್ವಿಚಾರಕ ಚಂದ್ರಶೇಖರವರು ಸ್ವಾಗತಿಸಿ ಸೇವಾಪ್ರತಿನಿದಿ ಅಮಿತಾ ವಂದಿಸಿದರು. ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ನಾರಾಯಣ ಕೆ. ಕಾರ್ಯಕ್ರಮ ನಿರೂಪಿಸಿದರು.
