ಬಂಟ್ವಾಳ: ಮಾಣಿ,ಪೆರಾಜೆಯ ಗ್ರಾಮಸಹಾಯಕರೊಬ್ಬರಿಗೆ ಪಂ.ಸದಸ್ಯರೊಬ್ಬರ ಸಹಿತ ಇಬ್ಬರು ಸೇರಿ ಜಾತಿ ನಿಂದನೆಗೈದು,  ,ಜೀವಬೆದರಿಕೆ ಒಡ್ಡಿರುವ ಘಟನೆ ಮಾಣಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದಿದ್ದು,ಈಬಗ್ಗೆ ವಿಟ್ಲ ಠಾಣೆಗೆ ದೂರು ಸಲ್ಲಿಸಲಾಗಿದೆ.
ಮಾಣಿ ಪಂಚಾಯತ್ ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಹಾಗೂ ವಲಯ ಯುವ ಕಾಂಗ್ರಸ್ ಅಧ್ಯಕ್ಷ ವಿಕೇಶ್ ಶೆಟ್ಟಿ ಎಂಬವರು ಸೇರಿಕೊಂಡು ಗ್ರಾಮಸಹಾಯಕ ವಿಶ್ವನಾಥ ನಾಯ್ಕ ರವರಿಗೆ ಜಾತಿನಿಂದನೆಗೈದು,ಹಲ್ಲೆ ನಡೆಸಿದಲ್ಲದೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆಂದು ಆರೋಪಿಸಲಾಗಿದೆ. ನಡೆದಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜಿಪಂ ಸದಸ್ಯೆ ಮಂಜುಳಾ ಮಾವೆ ಮತ್ತು ಇತರೆ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಯೇ ಆರೋಪಿಗಳು ಈ ಕ್ರತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.
ಘಟನೆಯ ಬಗ್ಗೆ ವಿಟ್ಲ ಠಾಣೆಗೆ ದೂರು ಸಲ್ಲಿಸಲಾಗಿದೆ. IMG-20170822-WA0034(1) (1)
ಖಂಡನೆ : ಈ ಕ್ರತ್ಯವನ್ನು ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ಬಂಟ್ವಾಳ ತಾಲೂಕು ಗಹಟಕ ಖಂಡಿಸಿದೆಯಲ್ಲದೆ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳ ನಿಯೋಗ ಮಂಗಳವಾರ ಬಂಟ್ವಾಳ ತಹಶೀಲ್ದಾರರನ್ನು ಭೇಟಿಯಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿತು.ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೂ ಮನವಿಯ ಪ್ರತಿಯನ್ನು ರವಾನಿಸಲಾಗಿದೆ.

By Suddi9

Leave a Reply

Your email address will not be published. Required fields are marked *