ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಿರ್ಣೋದ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇದರ ಮಾಹಿತಿ ಸಲಹೆ ಸೂಚನೆಗಳನ್ನು ಸೂಚಿಸಲು ಶ್ರೀ ಕ್ಷೇತ್ರ ಪೊಳಲಿಯ ಭಕ್ತರ ಜನರ ಸಭೆಯು ತೆಂಕುಳಿಪಾಡಿ,ಬಡಗುಳಿಪಾಡಿ,ಮೊಗರು ಗ್ರಾಮದ ಕಮಿಟಿ ರಚಿಸಲು ಸಭೆಯನ್ನು ಮಳಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರುಗಿತು.
ದೇವಳದ ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಯು. ತಾರಾನಾಥ ಆಳ್ವ,ಮೊಕ್ತೇಸರ ಚೇರಾ ಸೂರ್ಯನಾರಾಯಣ ರಾವ್,ಜೀರ್ಣೋದ್ಧಾರ ಕಮಿಟಿಯ ಸದಸ್ಯರಾದ ಅರುಣು ಆಳ್ವ, ಸುಬ್ರಾಯ ಕಾರಂತ, ಚಂದ್ರಶೇಖರ ಭಂಡಾರಿ ಮತ್ತು ಉದಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

